ಶನಿವಾರ, ಡಿಸೆಂಬರ್ 4, 2021
24 °C

'ಆದಿಪುರುಷ್‌'ನಲ್ಲಿ ಜಾನಕಿ ಪಾತ್ರದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ಕೃತಿ ಸನೂನ್

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೌರಾಣಿಕ ಕಥಾ ಹಂದರವುಳ್ಳ ಹಿಂದಿ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ, ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ ‘ಆದಿಪುರುಷ್‘ 2022 ಆಗಸ್ಟ್ 11 ಕ್ಕೆ ಬಿಡುಗಡೆಯಾಗಲಿದೆ ಎನ್ನುವುದು ಹಳೇ ಸುದ್ದಿ.

ಇದೀಗ ಈ ಚಿತ್ರದಲ್ಲಿ ರಾಮನಿಗೆ ಜೊತೆಯಾಗಿ ಜಾನಕಿಯಾಗಿ ಅಭಿನಯಿಸುತ್ತಿರುವ ಕೃತಿ ಸನೂನ್ ಅವರು ತಮ್ಮ ಪಾಲಿನ ಚಿತ್ರೀಕರಣ ಮುಗಿಸಿದ್ದು, ಅವರು ತಮ್ಮ ಪಾತ್ರದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಈ ಕುರಿತು ಇನ್ಸ್ಟಾಗ್ರಾಂ ಪೋಸ್ಟ್ ಹಾಕಿರುವ ಅವರು, ‘ಇಂತಹ ಅದ್ಭುತ ಪಯಣವೊಂದು ಇಷ್ಟು ಬೇಗ ಮುಗಿಯುತ್ತದೆ ಎಂದು ನಾನು ಭಾವಿಸಿರಲಿಲ್ಲ. ನಾನು ಈ ಚಿತ್ರದಲ್ಲಿ ಜಾನಕಿಯಾಗಿ ಅಭಿನಯಿಸಿದ್ದಕ್ಕೆ ನನ್ನ ಹೃದಯ ತುಂಬಿ ಬಂದಿದೆ. ರಾಮಾಯಣದ ಜಾನಕಿ ನನ್ನನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದಾಳೆ. ನನಗೆ ಈ ಪಾತ್ರ ಮಾಡಿದ್ದಕ್ಕೆ ಹೆಮ್ಮೆಯಾಗುತ್ತಿದೆ. ಅವಕಾಶ ನೀಡಿದ ಚಿತ್ರದ ನಿರ್ದೇಶಕ ಓಂ ರಾವುತ್ ಅವರಿಗೆ ನಾನು ಆಭಾರಿಯಾಗಿದ್ದೇನೆ’ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಓಂ ರಾವುತ್ ಕೂಡ ಟ್ವಿಟರ್‌ನಲ್ಲಿ ಕೃತಿ ಅವರು ಜಾನಕಿ ಪಾತ್ರ ನಿರ್ವಹಿಸಿದ್ದನ್ನು ಕೊಂಡಾಡಿ ಪೋಸ್ಟ್ ಹಾಕಿದ್ದಾರೆ.

 ಆದಿಪುರುಷ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಟಿ ಸೀರೀಸ್ ಪ್ರೊಡಕ್ಸನ್ ಕಂಪನಿ ಈ ಚಿತ್ರವನ್ನು ಸುಮಾರು ₹500 ಕೋಟಿ ವೆಚ್ಚದಲ್ಲಿ ರ್ಮಾಣ ಮಾಡುತ್ತಿದೆ. ಅಜಯ್ ದೇವಗನ್ ಅಭಿನಯದ ‘ತಾನಾಜಿ’ ಸಿನಿಮಾ ನಿರ್ದೇಶಿಸಿದ್ದ ಓಂ ರಾವುತ್ ‘ಆದಿಪುರುಷ್’ ನಿರ್ದೇಶನ ಮಾಡುತ್ತಿದ್ದಾರೆ.

ರಾಮಾಯಣದ ಕಥೆ ಹೊಂದಿರುವ ಆದಿಪುರುಷ್‌ 3ಡಿ ಯಲ್ಲಿ ಮೂಡಿಬರಲಿದ್ದು, ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೂನ್, ರಾವಣನಾಗಿ ಸೈಫ್ ಅಲಿ ಖಾನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ನಾಗೆ ಅಭಿನಯಿಸುತ್ತಿದ್ದಾರೆ.

 

ಆದಿಪುರುಷ್ ಕನ್ನಡ, ತಮಿಳು ಹಾಗೂ ಮಲಿಯಾಳಿಗೂ ಡಬ್ ಆಗಲಿದೆ. ಇನ್ನೊಂದೆಡೆ ಅಕ್ಷಯ್ ಕುಮಾರ್ ಅಭಿನಯದ ‘ರಕ್ಷಾ ಬಂಧನ್‘ ಸಿನಿಮಾ ಕೂಡ 2022 ಆಗಸ್ಟ್ 11 ಕ್ಕೆ ಬಿಡುಗಡೆಯಾಗಲಿದ್ದು, ಎರಡು ದೊಡ್ಡ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಬಾಲಿವುಡ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.

ಇನ್ನೊಂದೆಡೆ ದೇಶದಲ್ಲಿ ಕೊರೊನಾ ಆರ್ಭಟ ತಗ್ಗುತ್ತಿದ್ದು ಬಹುತೇಕ ಕಡೆ ಸಿನಿಮಾ ಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಸರ್ಕಾರಗಳು ಅನುಮತಿ ನೀಡಿವೆ. ಹೀಗಾಗಿ ಸಾಲು–ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿವೆ. ಪ್ರಭಾಸ್ ಅಭಿನಯದ ರೋಮ್ಯಾಂಟಿಕ್ ಕಥೆ ಹೊಂದಿರುವ 'ರಾಧೆ-ಶ್ಯಾಮ್' ಜನವರಿ 14 ಕ್ಕೆ ಬಿಡುಗಡೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು