ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಾಲ್‌ ಸಿಂಗ್‌ ಛಡ್ಡಾ’ 100 ಸ್ಥಳಗಳಲ್ಲಿ ಚಿತ್ರೀಕರಣ

Last Updated 30 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

‘ಲಾಲ್ ಸಿಂಗ್‌ ಛಡ್ಡಾ’ ಸಿನಿಮಾದ ಚಿತ್ರೀಕರಣವು ದೇಶದ ಬೇರೆ ಬೇರೆ ಭಾಗದಲ್ಲಿ 100 ಸ್ಥಳಗಳಲ್ಲಿ ಚಿತ್ರೀಕರಣವಾಗಲಿದೆ.

ಈ ಸಿನಿಮಾದ ಚಿತ್ರೀಕರಣಕ್ಕೆ ಎಲ್ಲಾ ಸಿದ್ಧತೆಗಳನ್ನು ಅಮೀರ್‌ ಖಾನ್‌ ನಡೆಸುತ್ತಿದ್ದಾರೆ. ಇದು ಹಾಲಿವುಡ್‌ನ ‘ಫಾರೆಸ್ಟ್‌ ಗಂಪ್‌’ ಸಿನಿಮಾದ ರಿಮೇಕ್‌ ಚಿತ್ರವಾಗಿದೆ. ಮೂಲ ಸಿನಿಮಾದಂತೆಯೇ ಈ ಸಿನಿಮಾವನ್ನು ದೇಶದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಸಲಿದ್ದಾರೆ.

ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಮೀರ್‌ ನಟಿಸುತ್ತಿದ್ದು,ಈ ಚಿತ್ರಕ್ಕಾಗಿ ಈಗಾಗಲೇ ಕಠಿಣ ಡಯೆಟ್‌ ಹಾಗೂ ವ್ಯಾಯಾಮದ ಮೂಲಕ 20 ಕೆ.ಜಿ ತೂಕವನ್ನು ಕಳೆದುಕೊಂಡು ಸಣ್ಣಗಾಗಿದ್ದಾರೆ.ಈ ಚಿತ್ರವು ನಾಯಕನ ಜೀವನಪಯಣದ ಕುರಿತಾಗಿದ್ದು, ಹಾಗಾಗಿ ಬೇರೆ ಬೇರೆ ಸ್ಥಳಗಳಲ್ಲಿ ಚಿತ್ರವನ್ನು ಚಿತ್ರೀಕರಿಸಬೇಕಾಗಿದೆ. ಸ್ಟುಡಿಯೊ, ಸೆಟ್‌ ಸೆಟಪ್‌ಗಳೆಲ್ಲಾ ಇದಕ್ಕೆ ಸರಿಹೋಗಲ್ಲ ಎಂದು ನಂಬಿರುವ ಅಮೀರ್‌, ದೇಶದಲ್ಲಿ ಚಿತ್ರೀಕರಣಕ್ಕೆ 100 ಉತ್ತಮ ಸ್ಥಳಗಳನ್ನು ಆಯ್ಕೆ ಮಾಡುವಂತೆ ತಮ್ಮ ಚಿತ್ರತಂಡಕ್ಕೆ ತಿಳಿಸಿದ್ದಾರೆ.

ದೆಹಲಿ, ಗುಜರಾತ್‌, ಮುಂಬೈ, ಕೋಲ್ಕತ್ತ, ಬೆಂಗಳೂರು, ಹೈದರಾಬಾದ್‌ ಸೇರಿದಂತೆ ಇನ್ನು ಕೆಲ ರಾಜ್ಯಗಳಲ್ಲಿ ಅಮೀರ್‌ ಖಾನ್‌ ತಮ್ಮ ಈ ಸಿನಿಮಾವನ್ನು ಚಿತ್ರೀಕರಿಸಲಿದ್ದಾರೆ.ಈ ಚಿತ್ರಕ್ಕೆ ಅತುಲ್‌ ಕುಲಕರ್ಣಿ ಚಿತ್ರಕತೆ ಬರೆಯುತ್ತಿದ್ದು, ಅದ್ವೈತ್‌ ಚಂದನ್‌ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರ ನಿರ್ಮಾಣ ಮಾಡುತ್ತಿರುವುದು ವಯಾಕಾಮ್‌18 ಸ್ಟುಡಿಯೋಸ್‌ ಹಾಗೂ ಅಮೀರ್‌ ಖಾನ್‌ ಪ್ರೊಡಕ್ಷನ್ಸ್‌. 2020ರ ಕ್ರಿಸ್‌ಮಸ್‌ಗೆ ಈ ಚಿತ್ರ ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT