ನಿರ್ದೇಶಕ ಸಿಂಪಲ್ ಸುನಿ ಬಳಿ ಸಾಲು, ಸಾಲು ಸಿನಿಮಾಗಳಿವೆ. ಅವುಗಳ ನಡುವೆ ಅವರು ‘ಲಂಬೋದರ 2.0’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು.

‘ಈ ಬಾರಿ ಎಐ ಆಧಾರಿತ ಸಾಮಾಜಿಕ, ಥ್ರಿಲ್ಲರ್ ಕಥಾಹಂದರದ ಚಿತ್ರವನ್ನು ಶುರು ಮಾಡುತ್ತಿದ್ದೇನೆ. ಜತೆಗೆ ಈ ಚಿತ್ರದಿಂದ ಇಬ್ಬರು ಹೊಸ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇವೆ. ನಾಯಕನಾಗಿ ಅನಿಲ್ ಶೆಟ್ಟಿ, ನಾಯಕಿಯಾಗಿ ಸಾಚಿ ಬಿಂದ್ರಾ ನಟಿಸಲಿದ್ದಾರೆ. ಅನಿಲ್ ಶೆಟ್ಟಿ ಕೇವಲ ನಟ ಮಾತ್ರ ಅಲ್ಲ, ಈ ಚಿತ್ರದ ಲೇಖಕ ಕೂಡ. ಅವರದ್ದೇ ನಿರ್ಮಾಣ ಸಂಸ್ಥೆ ಮಾಸ್ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ಸದ್ಯ ಚಿತ್ರ ಪ್ರೀಪ್ರೊಡಕ್ಷನ್ ಹಂತದಲ್ಲಿದೆ’ ಎಂದು ಸುನಿ ಹೇಳಿದ್ದಾರೆ.

ಸಾಚಿ ಬಿಂದ್ರಾ ಈಗಾಗಲೇ ಬಾಲಿವುಡ್ ಚಿತ್ರವೊಂದರಲ್ಲಿ, ನಟಿಸಿದ್ದು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಜೆನ್ಜಿಗಳಿಗೆ ಬೇಕಾದ, ಹಾಸ್ಯಮಯ ಕಥಾಹಂದರವನ್ನು ಈ ಚಿತ್ರ ಹೊಂದಿದೆ.

ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ, ಸಂತೋಷ್ ರೈ ಪತಾಜೆ ಛಾಯಾಚಿತ್ರಗ್ರಹಣವಿದೆ.