ಗುರುವಾರ , ಆಗಸ್ಟ್ 5, 2021
22 °C

‘ಲಂಕೆ’ ಲಿರಿಕಲ್ ಸಾಂಗ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿರುವ ‘ಲಂಕೆ’ ಚಿತ್ರದ ಲಿರಿಕಲ್ ವಿಡಿಯೋ ಹಾಡು ಬಿಡುಗಡೆಯಾಗಿದೆ. ಆನಂದ್ ಆಡಿಯೋದ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಆಗಿದೆ.

ಗಾಯಕ ಆಂಥೋನಿ ದಾಸ್‌ ಧ್ವನಿಯಲ್ಲಿ ‘ನೋಡು ನೋಡು ಯೋಗಿ ಬಾಸು ಮಾಸು ಎಂಟ್ರಿ ಕೊಟ್ಟೇಬಿಟ್ಟ. ಧೂಳಿನಿಂದ ಎದ್ದು ಬಂದು ಅಂಬಾರಿ ಏರೇ ಬಿಟ್ಟ’ ಹಾಡು ಮೂಡಿಬಂದಿದೆ. ಹಾಡಿಗೆ ರಾಮಪ್ರಸಾದ್‌ ಎಂ.ಡಿ. ಅವರ ಸಾಹಿತ್ಯ, ಕಾರ್ತಿಕ್‌ ವರ್ಮ ಅವರ ಸಂಗೀತ ಇದೆ. ಚಿತ್ರಕ್ಕೆ ರಾಮ್‌ ಪ್ರಸಾದ್‌ ಅವರ ಕಥೆ, ಚಿತ್ರಕಥೆ ಇದೆ. ಸಂಭಾಷಣೆಗೆ ರಾಮಪ್ರಸಾದ್‌ ಅವರ ಜೊತೆ ಗುರುರಾಜ ದೇಸಾಯಿ ಕೈಜೋಡಿಸಿದ್ದಾರೆ.

ದಿ ಗ್ರೇಟ್ ಎಂಟರ್‌ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

 

ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ, ಆದ್ಯ ನಾಯಕ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು