ಲೂಸ್ ಮಾದ ಯೋಗಿ ನಾಯಕ ನಟನೆಯ ‘ನಾನು, ಅದು ಮತ್ತು ಸರೋಜ’ ಚಿತ್ರ ಡಿಸೆಂಬರ್ 30ರಂದು ತೆರೆ ಕಾಣಲಿದೆ.
ನಾನು ಈ ಹಿಂದೆ ‘ಮಡಮಕ್ಕಿ’ ಚಿತ್ರ ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ. ‘ನಾನು, ಅದು ಮತ್ತು ಸರೋಜ’ ಚಿತ್ರದ ಕಥೆ ಮೂರು ಪ್ರಮುಖ ಪಾತ್ರಗಳ ಸುತ್ತ ಸಾಗುತ್ತದೆ. ಲೂಸ್ ಮಾದ ಯೋಗಿ, ಹಿರಿಯ ನಟ ದತ್ತಣ್ಣ ಹಾಗೂ ಅಪೂರ್ವಾ ಭಾರದ್ವಾಜ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಅದು ಎಂಬುದು ಕೂಡ ಚಿತ್ರದಲ್ಲಿ ಮುಖ್ಯಪಾತ್ರ. ಅದನ್ನು ಚಿತ್ರದಲ್ಲೇ ನೋಡಬೇಕು ಎಂದರು ನಿರ್ದೇಶಕ ವಿನಯ್ ಪ್ರೀತಮ್.
‘ನಾನು ವಿಭಿನ್ನ ಕಥೆಯ ಸಿನಿಮಾಗಳಲ್ಲಿ ನಟಿಸಲು ಇಷ್ಟಪಡುತ್ತೇನೆ. ಹಾಗಾಗಿ ಪ್ರೋತ್ಸಾಹಿಸಿ’ ಎಂದರು ನಾಯಕ ಯೋಗಿ.
‘ನನ್ನದು ಈ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆಯ ಪಾತ್ರ. ಸಾಮಾನ್ಯವಾಗಿ ಬೇರೆ ನಟಿಯರು ಈ ಪಾತ್ರ ಮಾಡಲು ಮುಜುಗರಪಡುತ್ತಾರೆ. ನನಗೂ ಮೊದಲು ಸ್ವಲ್ಪ ಮುಜಗರವಾಯಿತು. ಆದರೆ ಪಾತ್ರವನ್ನು ಪಾತ್ರ ಎಂದು ತಿಳಿದು, ನಟಿಸಿದ್ದೆ’ ಎಂದರು ನಟಿ ಅಪೂರ್ವ ಭಾರದ್ವಾಜ್.
ಸಂದೀಪ್, ಕುರಿ ಬಾಂಡ್ ರಂಗ, ಪ್ರವೀಣ್ ಶೆಟ್ಟಿ ತಾರಾಗಣದಲ್ಲಿದ್ದಾರೆ. ಸಂಗೀತ ನಿರ್ದೇಶನ ಪ್ರಸಾದ್ ಶೆಟ್ಟಿ ಅವರದ್ದು. ಪೂಜಾ ವಸಂತಕುಮಾರ್ ಚಿತ್ರದ ನಿರ್ಮಾಪಕಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.