ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Kannada cinema | ಯೋಗಿ 50ನೇ ಚಿತ್ರ ‘ರೋಜಿ’

Last Updated 10 ಏಪ್ರಿಲ್ 2023, 20:18 IST
ಅಕ್ಷರ ಗಾತ್ರ

‘ದುನಿಯಾ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶ ಮಾಡಿದ್ದ ಯೋಗಿ, ವಿಭಿನ್ನ ಪಾತ್ರಗಳ ಆಯ್ಕೆ ಮತ್ತು ನಟನೆಯಿಂದ ಗುರುತಿಸಿಕೊಂಡವರು. ಲೂಸ್ ಮಾದನಾಗಿ ಜನಪ್ರಿಯರಾದ ಅವರ 50ನೇ ಚಿತ್ರ ‘ರೋಜಿ’ಗೆ ಇತ್ತೀಚೆಗೆ ಚಾಲನೆ ದೊರೆತಿದೆ. ಡಾಲಿ ಧನಂಜಯ ನೂತನ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಗೆಳೆಯನಿಗೆ ಶುಭ ಹಾರೈಸಿದರು.

‘ಯೋಗಿ ನನ್ನ ಆತ್ಮೀಯ ಗೆಳೆಯ. ಯೋಗಿ ಅಭಿನಯದ 50ನೇ ಸಿನಿಮಾದ ಚಿತ್ರೀಕರಣಕ್ಕೆ ಚಾಲನೆ ನೀಡಲು ಖುಷಿಯಾಗುತ್ತಿದೆ. ಶೂನ್ಯ ಕೂಡ ನಮ್ಮ ಸಂಸ್ಥೆಯ ನಿರ್ಮಾಣದ ಚಿತ್ರ ನಿರ್ದೇಶನ ಮಾಡಿದ್ದರು. ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ’ ಎಂದು ಡಾಲಿ ಹಾರೈಸಿದರು.

‘ಹೆಡ್ ಬುಷ್’ ಚಿತ್ರವನ್ನು ನಿರ್ದೇಶಿಸಿದ್ದ ಶೂನ್ಯ, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಡಿ.ವೈ.ರಾಜೇಶ್ ಹಾಗೂ ಡಿ.ವೈ.ವಿನೋದ್ ನಿರ್ಮಾಪಕರು.

‘ಇದು ನನ್ನ ಐವತ್ತನೇ ಚಿತ್ರ. ಚಿತ್ರದಲ್ಲಿ ಗ್ಯಾಂಗ್‌ಸ್ಟರ್‌ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನ ಪಾತ್ರ ಎನ್ನಬಹುದು. ಶೂನ್ಯ ಕಥೆಯನ್ನು ಚೆನ್ನಾಗಿ ಮಾಡಿಕೊಂಡಿದ್ದಾರೆ’ ಎಂದು ನಾಯಕ ಯೋಗಿ ಹೇಳಿದರು.

‘ಚಿತ್ರರಂಗದವರಿಗೆ ಚಿತ್ರಮಂದಿರ ದೇವಸ್ಥಾನವಿದ್ದಂತೆ. ಹಾಗಾಗಿ ಇಲ್ಲಿಯೇ ಹೊಸ ಸಿನಿಮಾ ಕೆಲಸ ಆರಂಭಿಸಿದ್ದೇವೆ. ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ’ ಎಂದು ನಿರ್ದೇಶಕ ಶೂನ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT