ಮಂಗಳವಾರ, ಅಕ್ಟೋಬರ್ 26, 2021
23 °C

'ಲವ್‌ ಬರ್ಡ್ಸ್‌’ ಆದ ಡಾರ್ಲಿಂಗ್‌ ಕೃಷ್ಣ, ಆಶಿಕಾ ರಂಗನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಲವ್‌ ಬರ್ಡ್ಸ್’ ಚಿತ್ರ ಸೆಟ್ಟೇರಿದೆ. ಇತ್ತೀಚೆಗೆ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಚಂದ್ರು ಕಡ್ಡಿಪುಡಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಪಿ.ಸಿ.ಶೇಖರ್ ನಿರ್ದೇಶನವಿದೆ. ಡಾರ್ಲಿಂಗ್‌ ಕೃಷ್ಣ ನಾಯಕ. ಅವರದ್ದು ಸಾಫ್ಟ್‌ವೇರ್‌ ಎಂಜಿನಿಯರ್‌ ಪಾತ್ರ. ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ. 

‘ಇದೊಂದು ಕಾರ್ಪೊರೇಟ್ ಶೈಲಿಯ ಚಿತ್ರ. ಅರ್ಜುನ್ ಜನ್ಯ ಅವರ ರಾಗ ಸಂಯೋಜನೆಯಲ್ಲಿ ಉತ್ತಮ ಹಾಡುಗಳು ಮೂಡಿಬರಲಿವೆ. ಎರಡು, ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ಮೊದಲ ಹಂತ ಬೆಂಗಳೂರಿನಲ್ಲಿ, ಮುಂದಿನ ಹಂತ ಮಂಡ್ಯ ಭಾಗದಲ್ಲಿ ನಡೆಯಲಿದೆ’ ಎಂದರು.

ರಂಗಾಯಣ ರಘು ತಾರಾಗಣದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು