ಶನಿವಾರ, ಮಾರ್ಚ್ 25, 2023
28 °C

ನಾಗಚೈತನ್ಯ–ಸಾಯಿ ‘ಲವ್‌ ಸ್ಟೋರಿ’ ಮುಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲುಗು ನಟ ನಾಗಚೈತನ್ಯ ಹಾಗೂ ಸಹಜ ಸುಂದರಿ ಸಾಯಿ ಪಲ್ಲವಿ ಮೊದಲ ಬಾರಿಗೆ ಒಂದೇ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲಿರುವ ‘ಲವ್‌ ಸ್ಟೋರಿ’ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. 

ಶೇಖರ್‌ ಕಮುಲ್ಲಾ ಆ್ಯಕ್ಷನ್‌ ಕಟ್‌ ಹೇಳಿರುವ  ರೊಮ್ಯಾಂಟಿಕ್‌ ಕತೆಯುಳ್ಳ ಚಿತ್ರವಾದ ಕಾರಣ ಈ ಮೊದಲು ಸಿನಿಮಾ ಪ್ರೇಮಿಗಳ ದಿನ (ಫೆ.14)ರಂದು ರಿಲೀಸ್‌ ಆಗಲಿದೆ ಎಂದು ಹೇಳಲಾಗಿತ್ತು. ಈಗ ಏಪ್ರಿಲ್‌ 2ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ನಾರಾಯಣ ದಾಸ್‌ ಕೆ.ನಾರಂಗ್‌ ಹಾಗೂ ಕೆ.ಪಿ ರಾಮ್‌ ಮೋಹನ್‌ ನಿರ್ಮಿಸಿರುವ ಚಿತ್ರದಲ್ಲಿ ತೆಲಂಗಾಣ ಶೈಲಿಯ ತೆಲುಗು ಭಾಷೆ ಪ್ರೇಕ್ಷಕರ ಮನರಂಜಿಸಲಿದೆ.

ಮಲಯಾಳದ ‘ಪ್ರೇಮಂ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ, ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಯಲ್ಲಿ ಬಿಗ್‌ ಹಿಟ್‌ಗಳನ್ನ ನೀಡಿದ್ದಾರೆ. ಇದೀಗ ಮೊದಲ ಬಾರಿಗೆ ನಾಗಚೈತನ್ಯ ಜತೆ  ‘ಲವ್‌ ಸ್ಟೋರಿ’ ಸಿನಿಮಾದಲ್ಲಿ ಜೊತೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು