ಕ್ಷಮಿಸಿ ‘ಶ್ರೀಮುರುಳಿ ಮದಗಜ’ ಅಲ್ಲ!

7

ಕ್ಷಮಿಸಿ ‘ಶ್ರೀಮುರುಳಿ ಮದಗಜ’ ಅಲ್ಲ!

Published:
Updated:
Deccan Herald

‘ಅಯೋಗ್ಯ’ ಸಿನಿಮಾ ನಿರ್ದೇಶಕ ಮಹೇಶ್‌, ಶ್ರೀಮುರುಳಿ ಸಿನಿಮಾ ನಿರ್ದೇಶಿಸುತ್ತಿರುವುದು ಗೊತ್ತಿರುವ ವಿಷಯವೇ. ತಮ್ಮ ಚಿತ್ರಕ್ಕೆ ಅವರು ‘ಶ್ರೀಮುರುಳಿ ಮದಗಜ’ ಎಂಬ ಶೀರ್ಷಿಕೆ ಇಟ್ಟಿದ್ದು ರಾಮು ಅವರ ಸಿಟ್ಟಿಗೆ ಕಾರಣವಾಗಿತ್ತು. ಯಾಕೆಂದರೆ ‘ಮದಗಜ’ ವಾಣಿಜ್ಯ ಮಂಡಳಿಯಲ್ಲಿ ಅವರ ಹೆಸರಿನಲ್ಲಿ ನೋಂದಣಿಯಾಗಿದೆ.  ‘ಶ್ರೀಮುರುಳಿ ಮದಗಜ’ ಎಂಬ ಹೆಸರಿಟ್ಟುಕೊಂಡು ಸಿನಿಮಾ ಮುಂದುವರಿಸುವ ಮಹೇಶ್‌ ಲೆಕ್ಕಾಚಾರಕ್ಕೆ ವಾಣಿಜ್ಯ ಮಂಡಳಿಯಿಂದಲೂ ರೆಡ್‌ ಸಿಗ್ನಲ್ ಸಿಕ್ಕಿದೆ. ಆದ್ದರಿಂದ ತಮ್ಮ ಚಿತ್ರದ ಹೆಸರು ಬದಲಾಯಿಸಿಕೊಳ್ಳಲು ತೀರ್ಮಾನಿಸಿದ್ದಾರೆ.

ಇದೇ ಉದ್ದೇಶಕ್ಕೆ ಪತ್ರಿಕಾಗೋಷ್ಠಿ ಕರೆದಿದ್ದ ಮಹೇಶ್‌, ‘ನಮ್ಮ ಚಿತ್ರದ ಶೀರ್ಷಿಕೆಯನ್ನು ಶ್ರೀಮುರುಳಿ ಮದಗಜ ಎಂದು ಘೋಷಿಸಿದ್ದೆವು. ಆದರೆ ಮದಗಜ ಎಂಬ ಶೀರ್ಷಿಕೆ ರಾಮಮೂರ್ತಿ ಅವರ ಬಳಿ ಇದೆ. ಅವರು ಆ ಶೀರ್ಷಿಕೆಯನ್ನು ನಮಗೆ ಕೊಡಲು ಒಪ್ಪಿಲ್ಲ. ಈ ಹಿಂದೆ ನಾನು ಅವರ ಬಗ್ಗೆ ಕೊಂಚ ತಪ್ಪಾಗಿ ಮಾತನಾಡಿದ್ದೆ. ಆ ಕುರಿತು ಅವರಲ್ಲಿಗೆ ಹೋಗಿ ಕ್ಷಮೆ ಕೇಳಿದ್ದೇನೆ. ಅವರು ಕ್ಷಮಿಸಿದ್ದಾರೆ. ಈಗ ನಾವು ಪ್ರೊಡಕ್ಷನ್ ಎಂ21 ಎಂಬ ಹೆಸರಿನಲ್ಲಿ ಕೆಲಸ ಆರಂಭಿಸುತ್ತೇವೆ. ಫೆಬ್ರುವರಿ ಹೊತ್ತಿಗೆ ಶೀರ್ಷಿಕೆ ಅಂತಿಮಗೊಳಿಸುತ್ತೇವೆ’ ಎಂದರು.

‘ಸಮಸ್ಯೆ ಬಗೆಹರಿದಿದೆ. ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ ಸಿನಿಮಾ ಚಿತ್ರೀಕರಣ ಶುರುವಾಗಲಿದೆ’ ಎಂದರು ನಿರ್ಮಾಪಕ ಉಮಾಪತಿ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !