ಮಂಗಳವಾರ, ಆಗಸ್ಟ್ 16, 2022
30 °C

ಮದಗಜ ಟೀಸರ್‌ ಡಬ್ಬಿಂಗ್‌ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದಗಜ ಟೀಸರ್‌ ಡಬ್ಬಿಂಗ್‌ ಪೂರ್ಣಗೊಂಡ ಬಳಿಕ ನಿರ್ದೇಶಕ ಮಹೇಶ್ ಮತ್ತು ಶ್ರೀಮುರಳಿ(ಟ್ವಿಟರ್‌ ಚಿತ್ರ)

ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರ 25ನೇ ಚಿತ್ರ ಮದಗಜದ ಫಸ್ಟ್‌ಲುಕ್‌ ಟೀಸರ್‌ನ ಡಬ್ಬಿಂಗ್‌ ಮುಕ್ತಾಯವಾಗಿದೆ. ಅಂದಹಾಗೆ ನವೆಂಬರ್‌ನಿಂದ ಮದಗಜ ಅಲ್ಲಲ್ಲಿ ಸದ್ದು ಮಾಡುತ್ತಿದೆ. ಒಂದು ಕುತೂಹಲಕಾರಿ ಟೀಸರ್‌ನೊಂದಿಗೆ ಇದರ ಪ್ರಚಾರ ಆರಂಭವಾಗಿತ್ತು. 

ಇದೀಗ ಡಬ್ಬಿಂಗ್‌ ಮುಗಿಸಿದ ಖುಷಿಯಲ್ಲಿದ್ದಾರೆ ಶ್ರೀಮುರಳಿ. ಡಬ್ಬಿಂಗ್‌ ಸ್ಟುಡಿಯೋದಲ್ಲಿ ನಿರ್ದೇಶಕ ಮಹೇಶ್ ಜೊತೆಗೆ ಪೋಸ್‌ ಕೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಈಗ ಚಿತ್ರದ ಕುತೂಹಲಕಾರಿ ದೃಶ್ಯಗಳನ್ನು ಒಳಗೊಂಡ ಟೀಸರನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ. 

ಇನ್ನೊಂದು ಟೀಸರ್‌ ಬಿಡುಗಡೆ ಮತ್ತು ಡಿಸೆಂಬರ್‌ನಲ್ಲಿ ಹೊಸ ಸುದ್ದಿ ಕೊಡುವುದಾಗಿ ನವೆಂಬರ್‌ನಲ್ಲಿ ನಟ ಶ್ರೀಮುರಳಿ ಸುಳಿವು ನೀಡಿದ್ದರು. ಅವರು ಹೇಳಿದಂತೆ ಇನ್ನೊಂದು ಟೀಸರ್‌ಗೆ ಸಿದ್ಧತೆ ನಡೆದಿದೆ. ಇನ್ನೊಂದು ಕುತೂಹಲದ ಸುದ್ದಿ ಯಾವುದು ಎಂಬುದು ಇನ್ನೂ ಗೊತ್ತಾಗಿಲ್ಲ.

ಮದಗಜ ಚಿತ್ರವನ್ನು ವಾರಣಾಸಿ, ಮೈಸೂರು, ಬೆಂಗಳೂರು ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ. ಉಮಾಪತಿ ಫಿಲ್ಸ್ಮ್‌ ಬ್ಯಾನರ್‌ನಡಿ ಉಮಾಪತಿ ಶ್ರೀನಿವಾಸ್‌ ಗೌಡ ಅವರು ಚಿತ್ರ ನಿರ್ಮಿಸುತ್ತಿದ್ದಾರೆ. ಎಸ್‌.ಮಹೇಶ್‌ ಕುಮಾರ್‌ ನಿರ್ದೇಶನ ಇದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು