ಕ್ಯಾನ್ಸರ್ ಪೀಡಿತರಿಗೆ ನೆರವಾಗಲು ತಲೆಕೂದಲು ದಾನ ಮಾಡಿದ ಮಾಧುರಿ ದೀಕ್ಷಿತ್ ಪುತ್ರ

ಬೆಂಗಳೂರು: ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ಉದ್ದೇಶದಿಂದ ನಟಿ ಮಾಧುರಿ ದೀಕ್ಷಿತ್ ಅವರ ಪುತ್ರ ರಾಯನ್ ತಮ್ಮ ತಲೆ ಕೂದಲು ದಾನ ಮಾಡಿದ್ದಾರೆ.
ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಕೀಮೋಥೆರಪಿಗೆ ಒಳಗಾಗಿ ತಲೆ ಕೂದಲು ಉದುರುವುದು ಸಾಮಾನ್ಯ.
ಅವರಿಗೆ ವಿಗ್ ತಯಾರಿಸಲು ತಲೆ ಕೂದಲಿನ ಅಗತ್ಯವಿರುತ್ತದೆ. ಹೀಗಾಗಿ ಅದನ್ನು ಗಮನಿಸಿದ ರಾಯನ್, ಸುಮಾರು ಎರಡು ವರ್ಷಗಳ ಕಾಲ ತಲೆಕೂದಲು ಕತ್ತರಿಸದೆ ಹಾಗೆಯೇ ಉಳಿಸಿಕೊಂಡಿದ್ದರು. ನಂತರ ತಲೆಕೂದಲು ಕತ್ತರಿಸಿ, ಅದನ್ನು ಕ್ಯಾನ್ಸರ್ ಸೊಸೈಟಿಗೆ ನೀಡಿದ್ದಾರೆ.
ಪುತ್ರನ ಕುರಿತು ಮಾಧುರಿ ದೀಕ್ಷಿತ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಮಗನ ನಿರ್ಧಾರದ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದ್ದು, ಅಭಿಮಾನಿಗಳು ಕೂಡ ರಾಯನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೀಪದ ಬೆಳಕಿನಲ್ಲಿ ಕಂಗೊಳಿಸಿದ ಕೆಜಿಎಫ್ ಬೆಡಗಿ ಮೌನಿ ರಾಯ್
ದೇಶದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಪ್ರತಿವರ್ಷ ನವೆಂಬರ್ 7ರಂದು ‘ನ್ಯಾಷನಲ್ ಕ್ಯಾನ್ಸರ್ ಅವಾರ್‌ನೆಸ್ ಡೇ’ ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಮಾಧುರಿ ದೀಕ್ಷಿತ್, ಮಗನ ಕಾರ್ಯದ ಕುರಿತು ಪೋಸ್ಟ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.