ಶನಿವಾರ, ಮೇ 28, 2022
31 °C

ಮನಸೂರೆಗೊಂಡ ಮಹೇಶ್‌ ಬಾಬು ಮಗಳ ಮೊದಲ ಕುಚಿಪುಡಿ ನೃತ್ಯ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್: ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ದಂಪತಿ ಪುತ್ರಿ ಸಿತಾರಾ ಅವರು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದಾರೆ.

ಸಾಂಪ್ರದಾಯಿಕ ಉಡುಗೆತೊಟ್ಟು ಸಿತಾರಾ ರಾಮನವಮಿ ದಿನ ರಾಮನನ್ನು ಸ್ಮರಿಸುವ ಹಾಗೂ ಗುಣಗಾನ ಮಾಡುವ ಹಾಡಿಗೆ ಕುಚಿಪುಡಿ ನೃತ್ಯ ಮಾಡಿದ್ದಾರೆ. ಈ ವಿಡಿಯೊ ಹಂಚಿಕೊಂಡಿರುವ ಮಹೇಶ್‌ಬಾಬು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಿತಾರಾಗೆ ಕಲಿಸಿದ ಗುರುಗಳನ್ನು ಕೊಂಡಾಡಿದ್ದಾರೆ.

 

‘ರಾಮನವಮಿಯಂದು ಸಿತಾರಾ ಮಾಡಿದ ಕುಚಿಪುಡಿ ಈ ನೃತ್ಯ ನೋಡಿ ತುಂಬಾ ಸಂತಸವಾಗಿದೆ. ಅವಳ ನೃತ್ಯ ನೋಡಿ ನಾನು ಬೆರಗುಗೊಂಡಿದ್ದೇನೆ’ ಎಂದು ಮಹೇಶ್‌ಬಾಬು ಹೇಳಿಕೊಂಡಿದ್ದಾರೆ. ಇದಕ್ಕೂ ಮುನ್ನ ಸಿತಾರಾ ಸರ್ಕಾರು ವಾರಿಪಾಟ ಸಿನಿಮಾದ ಹಾಡೊಂದರಲ್ಲಿ (ಪೆನ್ನಿ ಸಾಂಗ್) ಕಾಣಿಸಿಕೊಂಡಿದ್ದಳು.

ಇನ್ನು ಮಹೇಶ್ ಬಾಬು ಅವರ ಬಹುನಿರೀಕ್ಷಿತ ಸರ್ಕಾರು ವಾರಿಪಾಟ ಸಿನಿಮಾ ಮೇ 12ಕ್ಕೆ ತೆರೆಗೆ ಬರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು