ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಷ್ಪ’ಗೆ ಅಲ್ಲು ಅರ್ಜುನ್‌ಗಿಂತ ಮೊದಲು ಸೆಲೆಕ್ಟ್ ಆಗಿದ್ದು ಯಾರು ಗೊತ್ತಾ?

Last Updated 30 ಜನವರಿ 2022, 6:47 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ನಂತರ ಕಾಲಘಟ್ಟದಲ್ಲಿ ದೇಶದ ಉದ್ದಗಲಕ್ಕೂ ಭಾರೀ ಯಶಸ್ಸು ಗಳಿಸಿರುವ ಚಿತ್ರವೆಂದರೆ ಅದು ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ‘ (ಪುಷ್ಪ, ದಿ ರೈಸ್).

ಡಿಸೆಂಬರ್ 17 ರಂದು ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆಲುಗು, ತಮಿಳು, ಕನ್ನಡ, ಮಲೆಯಾಳಂ, ಹಿಂದಿಯಲ್ಲಿ ಬಿಡುಗಡೆಯಾದ ಈ ಸಿನಿಮಾ ಭಾರೀ ಮಟ್ಟದ ಕಮರ್ಷಿಯಲ್ ಯಶಸ್ಸನ್ನು ಗಳಿಸಿ ಭಾಕ್ಸ್‌ ಆಫಿಸ್‌ನಲ್ಲಿ ದೊಡ್ಡ ಸದ್ದು ಮಾಡಿದೆ.

ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಒಟಿಟಿಯಲ್ಲಿ (ಅಮೆಜಾನ್ ಫ್ರೈಮ್‌) ಬಿಡುಗಡೆಯಾದರೂ ಹಣಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಇದೀಗ ಈ ಚಿತ್ರದ ಒಂದು ಕುತೂಹಲಕಾರಿ ಸಂಗತಿಯೊಂದು ಹೊರ ಬಿದ್ದಿದೆ.

ಅಷ್ಟಕ್ಕೂ ಪುಷ್ಪ ಪಾತ್ರಕ್ಕೆ ನಿರ್ದೇಶಕ ಸುಕುಮಾರ್ ಅವರು ಮೊದಲು ಮಹೇಶ್ ಬಾಬು ಅವರನ್ನು ಸಂಪರ್ಕಿಸಿದ್ದರಂತೆ. ಆದರೆ, ಮಹೇಶ್ ಬಾಬು ಈ ಚಿತ್ರದ ಸ್ಕ್ರಿಫ್ಟ್ ಸಮಾಜ ವಿರೋಧಿ ನಾಯಕನ ಪಾತ್ರವನ್ನು ಹೊಂದಿದೆ ಎಂದು ತಿರಸ್ಕರಿಸಿದ್ದರಂತೆ. ಅಸಲಿಗೆ ಮಹೇಶ್ ಬಾಬು ಪುಷ್ಪ ಕಥೆಯನ್ನು ತುಂಬ ಇಷ್ಟಪಟ್ಟಿದ್ದರಂತೆ ಎಂದು ಕೆಲ ತೆಲಗು ಮಾಧ್ಯಮಗಳು ವರದಿ ಮಾಡಿವೆ.

ಮಹೇಶ್ ಬಾಬು ತಾವು ಸಮಾಜ ವಿರೋಧಿ ಪಾತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂಬ ನಿಯಮ ಪಾಲಿಸಿಕೊಂಡು ಬಂದಿರುವುದರಿಂದ ಪುಷ್ಪ ಸಿನಿಮಾಕ್ಕೆ ಅಲ್ಲು ಅರ್ಜುನ್ ಅವರನ್ನು ಸುಕುಮಾರ್ ಹಾಕಿಕೊಂಡರಂತೆ.

ಆಂಧ್ರಪ್ರದೇಶದ ರಕ್ತಚಂದನ ಚೋರರ ಕಥೆ ಹೊಂದಿರುವ ‘ಪುಷ್ಪ’ದಲ್ಲಿ ಅಲ್ಲು ಅರ್ಜುನ್ಪುಷ್ಪರಾಜ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರಿಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಡಾಲಿ ಧನಂಜಯ್, ಫಹಾದ್ ಫಾಸಿಲ್ ಮುಖ್ಯ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT