‘ಮಹಿರ’ ಚಿತ್ರದ ಟೀಸರ್‌ ಬಿಡುಗಡೆ: ವಿಭಿನ್ನ ಪಾತ್ರದಲ್ಲಿ ರಾಜ್‌ ಬಿ. ಶೆಟ್ಟಿ

7

‘ಮಹಿರ’ ಚಿತ್ರದ ಟೀಸರ್‌ ಬಿಡುಗಡೆ: ವಿಭಿನ್ನ ಪಾತ್ರದಲ್ಲಿ ರಾಜ್‌ ಬಿ. ಶೆಟ್ಟಿ

Published:
Updated:

ಬೆಂಗಳೂರು: ನಟ ರಾಜ್‌ ಬಿ. ಶೆಟ್ಟಿ ಅಭಿನಯದ ‘ಮಹಿರ’ ಚಿತ್ರದ ಟೀಸರ್‌ ಸೋಮವಾರ ಬಿಡುಗಡೆಯಾಗಿದೆ.

‘ಮಹಿರ’ ಚಿತ್ರವನ್ನು ಮಹೇಶ್ ಗೌಡ ನಿರ್ದೇಶಿಸಿದ್ದಾರೆ. ‘ಒಂದು ಮೊಟ್ಟೆಯ ಕಥೆ’ ಚಿತ್ರದ ರಾಜ್ ಬಿ. ಶೆಟ್ಟಿ ಈ ಚಿತ್ರದಲ್ಲಿ ಇಂಟಲಿಜೆನ್ಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. 

ಮಲಯಾಳಂ ಸೇರಿ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಮಂಗಳೂರು ಮೂಲದ ವರ್ಜಿನಿಯಾ ರಾಡ್ರಿಗ್ಸ್ ಮೊದಲ ಬಾರಿಗೆ ‘ಮಹಿರ’ ಮೂಲಕ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ಚಿತ್ರದಲ್ಲಿ ಅವರದ್ದು ತಾಯಿಯ ಪಾತ್ರವಾದರೆ, ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಅನುಭವ ಇರುವ ಚೈತ್ರಾ ಆಚಾರ್ ಮಗಳಾಗಿ ಕಾಣಿಸಿಕೊಂಡಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಅದನ್ನು ತೋರಿಸುವ ಉದ್ದೇಶ ನಿರ್ದೇಶಕರದ್ದು. ಹಲವು ವಿಶೇಷತೆಗಳಿರುವ ಸಿನಿಮಾ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

ಬಿಡುಗಡೆಯಾದ ಟೀಸರ್‌ ಅನ್ನು ಈವರೆಗೆ 9 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಇವನ್ನೂ ಓದಿ...

‘ಸೋಲುವ ಭಯವಿಲ್ಲ’

ತಾಯಿ ಮಗಳ ಥ್ರಿಲ್ಲರ್ ಕಥಾನಕ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !