ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೇರ್ಪಟ್ಟರೇ ಮಲೈಕಾ ಅರ್ಜುನ್?

Published 28 ಜೂನ್ 2024, 22:02 IST
Last Updated 28 ಜೂನ್ 2024, 22:02 IST
ಅಕ್ಷರ ಗಾತ್ರ

ಐದು ವರ್ಷಗಳಿಂದ ಡೇಟಿಂಗ್‌ ಮಾಡುತ್ತಿದ್ದ, ಘನತೆಯಿಂದ ನಮ್ಮ ಸಾಂಗತ್ಯವನ್ನು ಜಗದ ಮುಂದಿಟ್ಟೆವು ಎಂದು ಹೇಳಿಕೊಂಡಿದ್ದ ಮಲೈಕಾ ಅರೋರಾ ಮತ್ತು ಅರ್ಜುನ್‌ ಕಪೂರ್‌ ಬೇರ್ಪಟ್ಟಿದ್ದಾರೆ ಎಂಬ ಸುದ್ದಿಯೊಂದು ಬಿಟೌನ್‌ನಲ್ಲಿ ಹರಿದಾಡುತ್ತಿದೆ.

ವಾರದ ನಡುವೆ ಅರ್ಜುನ್‌ ಕಪೂರ್‌ ಹುಟ್ಟಿದ ಹಬ್ಬಕ್ಕೆ ಮಧ್ಯರಾತ್ರಿಯ ಪಾರ್ಟಿಗೆ ಜಾಹ್ನವಿ ಕಪೂರ್‌, ಆದಿತ್ಯ ರಾಯ್‌ ಮತ್ತಿತರ ಸಮೀಪದ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು. ಮಲೈಕಾ ಎಕ್ಸ್‌ ವೇದಿಕೆಯಲ್ಲಿ ’ನನ್ನ ಬೆನ್ನಹಿಂದೆಯೂ ನಾನು ಕಣ್ಮುಚ್ಚಿ ನಂಬಬಹುದಾದ ವ್ಯಕ್ತಿಗಳನ್ನು ಮಾತ್ರ ನಾನು ಇಷ್ಟ ಪಡುತ್ತೇನೆ‘ ಎಂಬುದಾಗಿ ಪೋಸ್ಟ್‌ ಮಾಡಿರುವುದು, ಇವರಿಬ್ಬರೂ ಬೇರ್ಪಟ್ಟಿದ್ದಾರೆಯೇ ಎಂಬ ಮಾತಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ.

ಕರಣ್‌ ಜೋಹರ್‌ ಅವರ ಕಾಫಿ ವಿತ್‌ ಕರಣ್‌ ಹೊಸ ಸೀಸನ್‌ನಲ್ಲಿಯೂ ತಮ್ಮ ಪ್ರೀತಿಯ ಬಗ್ಗೆ ಅರ್ಜುನ್‌ ಅತಿ ಅಭಿಮಾನದಿಂದ ಹೇಳಿಕೊಂಡಿದ್ದರು. ಕಳೆದ ತಿಂಗಳೂ ಇವರಿಬ್ಬರೂ ಈಗ ಒಟ್ಟಿಗೆ ಕಾಣುತ್ತಿಲ್ಲ, ಅವರಿಬ್ಬರ ಯಾವ ಮಾತುಗಳೂ ಕೇಳಿಬರುತ್ತಿಲ್ಲ ಎಂಬ ದೂರುಗಳಿಗೆ ಅವರಿಬ್ಬರೂ ಒಟ್ಟಿಗೆ ಇದ್ದಾರೆ ಎಂದು ಮಲೈಕಾ ಅವರ ಮ್ಯಾನೇಜರ್‌ ಉತ್ತರಿಸಿದ್ದರು.

ಹುಟ್ಟುಹಬ್ಬದ ಸಂಭ್ರಮದಲ್ಲಿ ಜೋಡಿ ಜೊತಿಗಿಲ್ವಲ್ಲ ಎಂದು ಅಭಿಮಾನಿಗಳು ಇವರಿಬ್ಬರ ಬಾಂಧವ್ಯದ ಬಗ್ಗೆ ಚರ್ಚಿಸುತ್ತಲಿದ್ದಾರೆ. ಮಲೈಕಾ ಅರೋರಾ ಅರ್ಬಾಜ್‌ ಖಾನ್‌ ಅವರಿಂದ ವಿಚ್ಛೇದನ ಪಡೆದ ನಂತರ ಅರ್ಜುನ್‌ ಕಪೂರ್‌ ಅವರೊಂದಿಗೆ ತಮ್ಮ ಬಾಂಧವ್ಯವನ್ನು ಎಕ್ಸ್‌ ವೇದಿಕೆಯಲ್ಲಿಯೇ ಬಹಿರಂಗ ಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT