ಮಂಗಳವಾರ, ಜೂನ್ 28, 2022
25 °C

ತೂಕ ಹೆಚ್ಚಾಗಿದೆಯೆಂದು ಗೇಲಿ ಮಾಡಿದವರಿಗೆ ಸೂಕ್ತ ಪ್ರತಿಕ್ರಿಯೆ ನೀಡಿದ ಸನುಷಾ!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Sanusha/Instagram

ದೇಹದ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡುವವರಿಗೆ ಬಹುಭಾಷಾ ನಟಿ ಸನುಷಾ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಮುಗುಳ್ನಗುವ ಸೆಲ್ಫಿ ಫೋಟೊವನ್ನು ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್‌ ಮಾಡಿದ ಸನುಷಾ ದೇಹದ ಬಗ್ಗೆ ಧನಾತ್ಮಕ ಯೋಚನೆ ಹೇಗೆ ಮಾಡಬೇಕೆಂದು ವಿವರಿಸಿದ್ದಾರೆ. 

ಸನುಷಾ ಇತ್ತೀಚೆಗೆ ದಪ್ಪವಾಗಿದ್ದಾರೆ. ತೂಕ ಹೆಚ್ಚಾಗಿದೆ ಎಂದೆಲ್ಲ ಟ್ರೋಲ್‌ ಮಾಡಲಾಗಿತ್ತು. ಟ್ರೋಲಿಗರಿಗೆ ಪ್ರತ್ಯುತ್ತರ ನೀಡಿರುವ ನಟಿ ಮೊದಲು ನಿಮ್ಮದನ್ನು ನೀವು ನೋಡಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ. 

ಮೆಚ್ಚುಗೆ ಗಳಿಸಿದ ಸನುಷಾರ ಸಂದೇಶ
ಬಾಲನಟಿಯಾಗಿ ಸಿನಿಮಾ ಕ್ಷೇತ್ರಕ್ಕೆ ಆಗಮಿಸಿದ ಸನುಷಾ ಮಲಯಾಳಂ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಇತ್ತೀಚೆಗೆ ಸನುಷಾ ತನ್ನ ದೇಹದ ತೂಕದ ಬಗ್ಗೆ ಹೆಚ್ಚು ಚಿಂತೆಗೀಡಾಗಿದ್ದಾರೆ' ಎಂಬೆಲ್ಲ ಸಂದೇಶಗಳು ರವಾನೆಯಾಗಿದ್ದವು. ಇದಕ್ಕೆ ಪ್ರತ್ಯುತ್ತರವಾಗಿ ಮುಗುಳ್ನಗುತ್ತಿರುವ ಸೆಲ್ಫಿ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ ನಟಿ ಬರಹದಲ್ಲೇ ಟ್ರೋಲಿಗರ ಕಪಾಳಮೋಕ್ಷ ಮಾಡಿದ್ದಾರೆ.

''ಓಹ್‌ ಹೌದು!! ಯಾರೆಲ್ಲ ನನ್ನ ದೇಹದ ತೂಕದ ಬಗ್ಗೆ ಮಾತನಾಡಿದ್ದೀರೋ, ಚಿಂತಿಸುತ್ತಿದ್ದಿರೋ ಮತ್ತು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದೀರೋ, ಬಹುಶಃ ಅವರೆಲ್ಲರಿಗೂ ನನಗಿಂತಲೂ ಹೆಚ್ಚು ಕಾಳಜಿಯಿರಬೇಕು. ತೂಕ ಇಳಿಸಿಕೊಳ್ಳಲು ಮತ್ತು ಸುಂದರವಾಗಿರಲು ನಿಮಗೊಬ್ಬರಿಗೇ ಗೊತ್ತಿರುವುದಲ್ಲ'' ಎಂದು ಚಾಟಿ ಬೀಸಿದ್ದಾರೆ.

"ದೇಹದ ಬಗ್ಗೆ ಗೇಲಿ ಮಾಡುವವರಿಂದ ನಿಮಗೆ ಹೆಚ್ಚಾಗಿ ಹಿಂಸೆಯಾದರೆ, ನೆನಪಿಟ್ಟುಕೊಳ್ಳಿ ನೀವು ಯಾರ ಕಡೆಗಾದರೂ ಎರಡು ಬೆರಳು ತೋರಿಸಿದರೆ ನಿಮ್ಮನ್ನು ತೋರಿಸುವ ಮೂರು ಬೆರಳುಗಳು ಇರುತ್ತವೆ. ಯಾರೇನು 'ಪರ್ಫೆಕ್ಟ್‌' ಎಂಬುವವರಿಲ್ಲ. ನಿಮ್ಮ ಬಗ್ಗೆ, ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ಮತ್ತು ಮಾನಸಿಕತೆ ಬಗ್ಗೆ ಕಾಳಜಿ ವಹಿಸಿ'' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ತಾಣದಲ್ಲಿ ನಟಿ ಸನುಷಾರ ಬೋಲ್ಡ್‌ ಪ್ರತಿಕ್ರಿಯೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಮಲಯಾಳಂ ಚಿತ್ರ ಕಲ್ಲುಕೊಂಡೊರು ಪೆಣ್ಣು ಸಿನಿಮಾದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ನಂತರ ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಿ. ಮರುಮಕನ್‌ ಚಿತ್ರದಲ್ಲಿ ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಜೆರ್ಸಿ, ಜೀನಿಯಸ್‌, ಅಲೆಕ್ಸ್‌ ಪಾಂಡ್ಯನ್‌, ಮಿಲಿ ಮತ್ತು ವೇಟ್ಟ ಚಿತ್ರಗಳಲ್ಲಿ ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು