ಗುರುವಾರ , ಜನವರಿ 23, 2020
28 °C

ಹಾರರ್‌ ಥ್ರಿಲ್ಲರ್‌ನಲ್ಲಿ ಮಂಜು ವಾರಿಯರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಾತ್ಮಕ ಮತ್ತು ಪ್ರೇಮಕತೆಯ ಚಿತ್ರಗಳಲ್ಲಿ ನಟಿಸಿದ್ದ ಮಾಲಿವುಡ್‌ ಬೆಡಗಿ ಮಂಜು ವಾರಿಯರ್‌ ಇದೇ ಮೊದಲ ಬಾರಿಗೆ ಹಾರರ್‌ ಥ್ರಿಲ್ಲರ್‌ ಸಿನಿಮಾದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ.

ನಟ ಸನ್ನಿ ವೇಯ್ನ್‌ ಜತೆ ಮಂಜು ವಾರಿಯರ್‌ ನಟಿಸಲಿರುವ ಈ ಚಿತ್ರದ ಹೆಸರು ಇನ್ನೂ ನಿರ್ಧಾರವಾಗಿಲ್ಲ. ಜಿಸ್‌ ಟಾಮ್ಸ್‌ ಮೂವೀಸ್‌ ನಿರ್ಮಿಸಲಿರುವ ಈ ಚಿತ್ರಕ್ಕೆ ರಂಜಿತ್ ಕಮಲ್‌ ಶಂಕರ್‌ ಮತ್ತು ಸಲೀಲ್‌ ವಿ. ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. 

ನಟ ಮೋಹನ್‌ ಲಾಲ್‌ ಜತೆ ಮಲಯಾಳ ಚಿತ್ರ ‘ಲೂಸಿಫರ್‌‘ ಮತ್ತು ಧನುಷ್‌ ಜತೆ ತಮಿಳಿನ ‘ಅಸುರನ್‌’ ಚಿತ್ರ ದೊಡ್ಡ ಮಟ್ಟದ ಯಶಸ್ಸು ಗಳಿಸಿವೆ. ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಹಣವನ್ನೂ ಗಳಿಸಿವೆ. ರೋಶನ್‌ ಅಂಡ್ರ್ಯೂನಿರ್ದೇಶನದ ‘ಪ್ರದಿ ಪೂವನ್‌ಕೊಯಿ’ ಚಿತ್ರದಲ್ಲೂ ಮಂಜು ವಾರಿಯರ್‌ ಕಾಣಿಸಿಕೊಳ್ಳಲಿದ್ದಾರೆ.   

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು