ಬಾಲಿವುಡ್ನ ಜನಪ್ರಿಯ ನಟಿ ರಾಣಿ ಮುಖರ್ಜಿ ಅವರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು 30 ಸಂದಿದೆ. ಈ ಸಂಭ್ರಮದಲ್ಲಿ ರಾಣಿ ನಟನೆಯ ‘ಮರ್ದಾನಿ 3’ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿದೆ.

ಅಭಿರಾಜ್ ಮಿನವಾಲ ನಿರ್ದೇಶನದ ಮರ್ದಾನಿ 3 ಸಿನಿಮಾವನ್ನು ಆದಿತ್ಯ ಚೋಪ್ರಾ ಹಾಗೂ ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದ್ದಾರೆ. ರಾಣಿ ಮುಖರ್ಜಿ ಅವರು ಸಿನಿಮಾದಲ್ಲಿ ಶಿವಾನಿ ಶಿವಾಜಿ ರಾಯ್ ಪಾತ್ರದಲ್ಲಿ ನಟಿಸಿದ್ದಾರೆ.

ನಗರವೊಂದರಲ್ಲಿ ಒಂದೇ ವಾರದಲ್ಲಿ ಹಲವು ಮಕ್ಕಳು ನಿಗೂಢವಾಗಿ ಕಾಣೆಯಾಗುತ್ತಾರೆ. ಈ ಕುರಿತು ಬೇಧಿಸಲು ಇಲಾಖೆ ಆ ನಗರಕ್ಕೆ ಶಿವಾನಿ ಶಿವಾಜಿ ರಾಯ್ ಅವರನ್ನು ಕಳುಹಿಸಿಕೊಡುತ್ತದೆ. ಕಳ್ಳಸಾಗಣೆ ಮಾಫಿಯಾವನ್ನು ಹತ್ತಿಕ್ಕುವ ಹಾಗೂ ಭಯಾನಕವಾಗಿ ಕಾರ್ಯಾಚರಣೆ ಮಾಡುವುದನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ನಟಿ ರಾಣಿ ಮುಖರ್ಜಿ ನಟನೆಗೆ ಹಾಗೂ ಸಿನಿಮಾ ತಂಡದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿನಿಮಾದಲ್ಲಿ ಶಿವಾನಿ ಶಿವಾಜಿ ರಾಯ್ ಖಡಕ್ ಪೊಲೀಸ್ ಆಫೀಸರ್ ಪಾತ್ರವಾಗಿದೆ. ರಾಣಿ ಮುಖರ್ಜಿ ಅವರ ಪ್ರತಿ ಸ್ಪರ್ಧಿಯಾಗಿ ಮಕ್ಕಳನ್ನು ಅಪಹರಿಸುವ ಪಾತ್ರದಲ್ಲಿ ಮಲ್ಲಿಕಾ ಪ್ರಸಾದ್ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಜಾನಕಿ ಬೋಡಿವಾಲಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾದ ಚಿತ್ರಕಥೆಯನ್ನು ಆಯುಷ್ ಗುಪ್ತಾ ಬರೆದಿದ್ದಾರೆ. ಜನವರಿ 30 ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.