ಗುರುವಾರ , ಸೆಪ್ಟೆಂಬರ್ 23, 2021
26 °C
Marvel deadpool

ಮಾರ್ವಲಸ್‌ ಕೈ ಸೇರಿದ ‘ಡೆಡ್‌ಪೂಲ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರೈನ್‌ ರೆನಾಲ್ಡ್‌ನ ‘ಡೆಡ್‌ಪೂಲ್‌’ ಸಿನಿಮಾಗಳು ವೀಕ್ಷಕರಲ್ಲಿ ಬಹಳ ಜನಪ್ರಿಯತೆ ಪಡೆದಿವೆ. 2016 ಮತ್ತು 2018 ರಲ್ಲಿ ರಿಲೀಸ್‌ ಆದ ಡೆಡ್‌ಪೂಲ್‌ ಚಿತ್ರಗಳು ದೊಡ್ಡ ಯಶಸ್ಸು ಕಂಡಿತ್ತು. 

ಮಾರ್ವಲ್‌ ಸ್ಟುಡಿಯೋ ಐರನ್‌ ಮ್ಯಾನ್‌, ಅವೆಂಜರ್ಸ್‌, ಕ್ಯಾಪ್ಟನ್‌ ಅಮೆರಿಕಾ ಮಾದರಿಯ ಸಿನಿಮಾಗಳನ್ನು ನೀಡುವ ಮೂಲಕ ಒಂದು ರೀತಿಯಲ್ಲಿ ಹಾಲಿವುಡ್‌ನಲ್ಲಿ ದರ್ಬಾರ್‌ ಮಾಡ್ತಿದೆ. ಡೆಡ್‌ಪೂಲ್‌ ಮಾರ್ವಲ್‌ ಸ್ಟುಡಿಯೋದ ಸಿನಿಮಾಗಳಲ್ಲಿ ಠಕ್ಕರ್‌ ಕೊಡುತ್ತಿತ್ತು. ಆದರೆ ಇನ್ಮುಂದೆ ‘ಡೆಡ್‌ಪೂಲ್’ ಚಿತ್ರಗಳು ಕೂಡ ಮಾರ್ವಲ್‌ ಸ್ಟುಡಿಯೋದಲ್ಲಿ ನಿರ್ಮಾಣವಾಗಲಿದೆ. ‘ಡೆಡ್‌ಪೂಲ್‌’ ನಿರ್ಮಾಪಕರಲ್ಲಿ ಎಮಾ ವ್ಯಾಟ್‌ ಕೂಡ ಒಬ್ಬರು. ಡೆಡೆಪೂಲ್‌ ಮಾರ್ವಲ್‌ ಕೈ ಸೇರಿದ್ದರಿಂದ ಬೇಸರಗೊಂಡ ಎಮಾ, ಚಿತ್ರತಂಡದಿಂದ ಹೊರಬಂದಿದ್ದಾರೆ.  ಈ ಹಿಂದೆ ಡಿಸ್ನಿ ಮಾಲೀಕತ್ಚದ 29ತ್‌ ಸೆಂಚ್ಯುರಿ ಫಾಕ್ಸ್‌ ಪ್ರೊಡಕ್ಷನ್‌ನ ಅಧ್ಯಕ್ಷರಾಗಿ ಎಮಾ ಕಾರ್ಯ ನಿರ್ವಹಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು