ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಯಾಕನ್ನಡಿ’ ಹಿಡಿದ ಮುಂಬೈ ಬೆಡಗಿ

ಮುಗುಳುನಗೆ ಸುಂದರಿ ಈ ಕಾಜಲ್‌ ಕುಂದರ್
Last Updated 25 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

‘ಬೊಗಸೆ ಕಂಗಳ ಸುಂದರಿ,ಮುಂಬೈ ಬೆಡಗಿ’ಕಾಜಲ್‌ ಕುಂದರ್‌ಈಗ ಸ್ಯಾಂಡಲ್‌ವುಡ್‌ಗೆ‘ಮಾಯಾ ಕನ್ನಡಿ’ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದಾರೆ.ಹಿಂದಿ,ಇಂಗ್ಲಿಷ್,ಮರಾಠಿ,ಕನ್ನಡ,ತುಳು ಭಾಷೆಯಲ್ಲಿ ಮುತ್ತು ಪೋಣಿಸಿದಂತೆ ಮಾತನಾಡುತ್ತಾರೆ ಈ ಮುಗುಳುನಗೆಯ ಸುಂದರಿ.ನೋಡಲು ಸ್ವಲ್ಪ ಕುಳ್ಳಗೆ ಇದ್ದರೂಮಾತುಮಾತಿನ ನಡುವೆ ತುಳುಕಾಡುವ ಮುಗುಳುನಗೆಯಿಂದ ಈಕೆಯಸೌಂದರ್ಯ ಎದ್ದುಕಾಣಿಸುತ್ತದೆ.

ಇನ್ನಷ್ಟೇತೆರೆಗೆ ಬರಬೇಕಿರುವವಿನೋದ್‌ ಪೂಜಾರಿ ನಿರ್ದೇಶನದ‘ಮಾಯಾ ಕನ್ನಡಿ’ ಕನ್ನಡ ಸಿನಿಮಾದಲ್ಲಿ ಇವರು ಲೀಡ್‌ ರೋಲ್‌ನಲ್ಲಿಅಭಿನಯಿಸಿದ್ದಾರೆ.ಹಿಂದಿ, ಮರಾಠಿ ಸೀರಿಯಲ್,ತುಳುಸಿನಿಮಾಗಳಲ್ಲೂನಟಿಸಿದ್ದಾರೆ.ಕನ್ನಡದ ಹರಹರಮಹಾದೇವ ಧಾರಾವಾಹಿಯ ‘ಅಧಿತಿ’ ಪಾತ್ರದಲ್ಲಿ ಕಿರುತೆರೆ ವೀಕ್ಷಕರಿಗೆ ಈ ಕಾಜಲ್‌ ಪರಿಚಿತ ಮುಖ. ಚತುರ್ಭಾಷಾ ನಟಿ ಕಾಜಲ್‌ ಕುಂದರ್‌ಚಂದನವನಕ್ಕೆ ಹೊಸಬಳಾದರೂ,ತುಳು ಸಿನಿಮಾಕ್ಕೆಹಳಬಿ.

ಕೋಟಿ ಚನ್ನಯ್ಯ ಅವರ ತಾಯಿ ‘ದೇಯೀ ಬೈದೆತಿ’ ಬಯೋಪಿಕ್‌ ತುಳು ಚಿತ್ರ‘ದೇಯೀಬೈದೆತಿ’ಚಿತ್ರದಲ್ಲಿಬಾಲ ದೇಯಿಯಿಂದ ದೊಡ್ಡವಳಾಗುವ ದೇಯಿವರೆಗೆಕಾಜಲ್‌ ನಿರ್ವಹಿಸಿರುವ ಪಾತ್ರಪೋಷಣೆಯನ್ನು ಚಿತ್ರರಸಿಕರು ಮನಸಾರೆ ಮೆಚ್ಚಿಕೊಂಡಿದ್ದಾರೆ.

ಮುಂಬೈ ಯುನಿರ್ವಸಿಟಿಯ ಎಸ್‌ಐಎಸ್‌ ಸೈನ್ಸ್‌,ಆರ್ಟ್ಸ್‌,ಕಾಮರ್ಸ್‌ ಕಾಲೇಜಿನಲ್ಲಿ ಮಾಸ್‌ ಮೀಡಿಯಾದಲ್ಲಿಪದವಿ ಪಡೆದಿರುವ ಕಾಜಲ್‌,ಕನ್ನಡ ಚಿತ್ರರಸಿಕರ ಹೃದಯಕ್ಕೆ ಲಗ್ಗೆ ಇಡಲು ಕನಸುಗಳನ್ನು ತುಂಬಿಕೊಂಡು ಬಂದಿರುವ ಬಗ್ಗೆ ತಮ್ಮ ಅಂತರಂಗವನ್ನು ‘ಸಿನಿಮಾ ಪುರವಣಿ’ಯ ಮುಂದೆ ತೆರೆದಿಟ್ಟಿದ್ದಾರೆ.

· ಸಿನಿಮಾ ಆಸಕ್ತಿ ನಿಮ್ಮಲ್ಲಿ ಮೂಡಿದ್ದುಹೇಗೆ

ನಾನು ಬೇಸಿಕಲಿ ಡಾನ್ಸರ್‌. ಭರತನಾಟ್ಯ,ಜಾನಪದ,ವೆಸ್ಟ್ರನ್‌ಡಾನ್ಸ್‌ ಕಲಿತಿದ್ದರಿಂದ ಚಿಕ್ಕಂದಿನಿಂದಲೇ ಹಲವಾರು ಸ್ಟೇಜ್‌ ಪ್ರೋಗ್ರಾಮ್‌ ನೀಡಿದ್ದೇನೆ. ಭರತನಾಟ್ಯದಲ್ಲಿ 6 ವರ್ಷಗಳ ಕೋರ್ಸ್‌ ಪೂರ್ಣಗೊಳಿಸಿದ್ದೇನೆ. ಸೋನಿ ಟಿ.ವಿಯ ಉಗೆಉಗೆ ಶೋನಲ್ಲಿ ಚಿಕ್ಕ ವಯಸಿನಲ್ಲೇ ಏಳೆಂಟು ಬಾರಿಭಾಗವಹಿಸಿದ್ದೆ. ಮುಂಬೈ ರಂಗಭೂಮಿಯಲ್ಲೂ ತುಳು ನಾಟಕಗಳಲ್ಲಿ ಅಭಿನಯಿಸಿದ್ದೇನೆ.ನೃತ್ಯ ಮತ್ತು ರಂಗಭೂಮಿ ಆಸಕ್ತಿ ಬಣ್ಣದ ಲೋಕಕ್ಕೆ ಕರೆತಂದಿತು.

· ತುಳು ನಂಟಿನ ಬಗ್ಗೆ ಹೇಳಿ

ನನ್ನ ತಂದೆ ಗಣೇಶ್‌ ಕುಂದರ್‌ ಮತ್ತು ತಾಯಿ ಶಾರದಾ ಕುಂದರ್‌ ತುಳುನಾಡಿನವರು. ನಮ್ಮ ಮೂಲ ಬೇರು ಮಂಗಳೂರಿನ ಸಸಿಹಿತ್ಲು.ನಮ್ಮ ಮಾತೃ ಭಾಷೆತುಳು.ನಾನು ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ತಂದೆ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ. ಅಕ್ಕ ಪಾಯಲ್‌ ಕುಂದರ್‌ ಶಿಪಿಂಗ್‌ ಕಂಪನಿಯೊಂದರಲ್ಲಿ ಉದ್ಯೋಗಿ. ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಲು ತುಂಬಾ ಆಸಕ್ತಿ ಮತ್ತು ಆಸೆ ಇತ್ತು. ಆದರೆ,ಅಷ್ಟಾಗಿ ಅವಕಾಶಗಳು ಸಿಕ್ಕಿರಲಿಲ್ಲ.ತುಳು ನಂಟಿನಿಂದ ತುಳು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತು. ಈಗ ಅದು ಕನ್ನಡಕ್ಕೂ ವಿಸ್ತರಿಸಿದೆ.

· ಸಿನಿಮಾ ರಂಗದಲ್ಲಿ ನಿಮ್ಮ ಅನುಭವ

ಮೂರು ವರ್ಷಗಳ ಹಿಂದೆ ಒಂದು ಮರಾಠಿ ಸಿನಿಮಾದಲ್ಲಿ ಅಭಿನಯಿಸಿದ್ದೆ. ಆದರೆ,ಆ ಚಿತ್ರ ತೆರೆಕಾಣಲಿಲ್ಲ.ಹಿಂದಿಯ ಕಲಾತ್ಮಕ ಸಿನಿಮಾ ‘ಲೋಹರ್‌ ದಗ್ಗ’ದಲ್ಲೂ ನಟಿಸಿದ್ದೇನೆ. ಒಂದು ಆ್ಯಡ್‌ಫಿಲ್ಮ್‌ನಲ್ಲಿ ಅಭಿನಯಿಸಿದ್ದೇನೆ.ತುಳುವಿನ ‘ಪತ್ತನಾಜೆ’, ‘ದೇಯೀಬೈದೇತಿ’ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ.

ಕನ್ನಡದ ಹರಹರಮಹಾದೇವ ಸೀರಿಯಲ್‌, ಹಿಂದಿಯ ಸ್ಟಾರ್‌ ಭಾರತ್‌ನಲ್ಲಿ ಪ್ರಸಾರವಾದ ಚಂದ್ರಶೇಖರ್‌ ಆಜಾದ್‌, ಸೋನಿ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂ ಪೆಟ್ರೋಲ್‌ ಹಾಗೂಸಲಾಂ ಇಂಡಿಯಾ,ಟಿಡಿಮಿಡಿ ಫ್ಯಾಮಿಲಿ ಸೀರಿಯಲ್‌ಗಳ ಜತೆಗೆ ವೆಬ್‌ ಸಿರೀಸ್‌ಗಳಲ್ಲೂ ಅಭಿನಯಿಸಿದ್ದೇನೆ.

· ‘ಮಾಯಾ ಕನ್ನಡಿ’ಯಲ್ಲಿ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಹೇಗೆ

ಬಹಳಷ್ಟು ನಿರ್ದೇಶಕರಿಗೆ ನನ್ನ ಪ್ರೊಫೈಲ್‌ ವಿವರ ಕಳುಹಿಸಿದ್ದೆ. ರಂಜಿತ್‌ ಬಜ್ಪೆ ಅವರು ನನ್ನ ಪ್ರೊಫೈಲ್‌ ನೋಡಿ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಆದರೆ,ಆ ಸಿನಿಮಾ ಸೆಟ್ಟೇರಲಿಲ್ಲ. ‘ಮಾಯಾ ಕನ್ನಡಿ’ಯಲ್ಲಿ ಅಭಿನಯಿಸುವ ಚಾನ್ಸ್‌ ನೀಡಿದರು.

ಈ ಚಿತ್ರದಲ್ಲಿ ಕಾಲೇಜು ಕೌನ್ಸೆಲರ್‌ ಪಾತ್ರ ನನ್ನದು.ಸಿನಿಮಾ ಸ್ಕ್ರೀನಿಂಗ್ ನೋಡಿಲ್ಲ. ಸ್ಕ್ರೀನ್‌ ಪ್ಲೇ ತುಂಬಾ ಚೆನ್ನಾಗಿದೆ. ಸ್ಕ್ರಿಪ್ಟ್‌ ಓದುವಾಗಲೇ ಸಾಕಷ್ಟು ಕುತೂಹಲ ಮೂಡಿಸುತ್ತಿತ್ತು. ಎಲ್ಲ ವಯೋಮಾನದ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ. ಇದು ಬರೀ ಕಾಲೇಜು ವಿದ್ಯಾರ್ಥಿಗಳ ಕಥೆ ಆಧರಿಸಿದ ಸಿನಿಮಾ ಅಲ್ಲ; ಫ್ಯಾಮಿಲಿ ಓರಿಯೆಂಟೆಡ್‌ ಆಗಿದೆ. ಬಹಳಷ್ಟು ತಿರುವುಗಳು ಇದರಲ್ಲಿದೆ.

· ‘ಮಾಯಾ ಕನ್ನಡಿ’ ಮೇಲೆ ಏನು ನಿರೀಕ್ಷೆ ಇದೆ

‘ಮಾಯಾ ಕನ್ನಡಿ‘ಯ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಈ ಸಿನಿಮಾ ನನಗೆ ಕನ್ನಡದಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆಯುವುದನ್ನು ಎದುರು ನೋಡುತ್ತಿದ್ದೇನೆ.

·ನಿಮ್ಮ ಮುಂದಿರುವ ಸಿನಿಮಾಗಳು

ಮತ್ತೊಂದು ತುಳು ಸಿನಿಮಾ ‘ಮಾಜಿ ಮುಖ್ಯಮಂತ್ರಿ’ಯಲ್ಲಿ ಲೀಡ್‌ ರೋಲ್‌ನಲ್ಲಿ ಅಭಿನಯಿಸುತ್ತಿದ್ದೇನೆ. ಇದು ನನ್ನ ಮೊದಲ ಕಾಮಿಡಿ ಚಿತ್ರವೂ ಹೌದು.ಮೊದಲಾರ್ಧದ ಚಿತ್ರೀಕರಣ ಮುಗಿದಿದೆ.

· ಮುಂದೆ ಎಂತಹ ಪಾತ್ರಗಳನ್ನು ಬಯಸುತ್ತಿದ್ದೀರಿ

ಕಲಾವಿದರಿಗೆ ಇಂತಹದೇ ಪಾತ್ರ ಬೇಕೆಂದಿಲ್ಲ. ಪ್ರತಿಭೆ ತೋರಿಸಲು ಯಾವುದೇ ಪಾತ್ರವಾದರೂ ಸೈ. ಯಾವುದೇ ಭಾಷೆಯ ಚಿತ್ರವಾಗಲಿ ಅವಕಾಶ ಸಿಕ್ಕರೆ ನಟಿಸಲು ಸಿದ್ಧ.‌ನಾನು ವರ್ಸಟೈಲ್‌ ನಟಿ. ಬೋಲ್ಡ್‌ ಪಾತ್ರಗಳಲ್ಲಿ ಅಭಿನಯಿಸಲಾರೆ ಎನ್ನುವುದಿಲ್ಲ. ಕಥೆ,ಪಾತ್ರ ಬೋಲ್ಡ್‌ನೆಸ್‌ ಬಯಸುವಂತಿದ್ದರೆ, ಅಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ನನಗೆ ಅಳುಕು ಇಲ್ಲ. ಹಾಗಂತ ಚೀಪ್‌ ಆದ ಬೋಲ್ಡ್‌ ಪಾತ್ರವ್ಯಾಲಿಡ್‌ ಅಲ್ಲ ಎನ್ನುವುದೂ ಅರಿವಿದೆ.

· ನಿಮ್ಮ ಮುಂದಿರುವ ಸವಾಲು

ನನಗಿರುವ ಸವಾಲು ಮತ್ತು ಸಮಸ್ಯೆ ನನ್ನ ಹೈಟು. 5.3 ಅಡಿ ಎತ್ತರ ಇದ್ದೇನೆ. ‘ಆ್ಯಕ್ಟಿಂಗ್‌ಓಕೆ,ಆದರೆ, ಹೈಟು ಕಡಿಮೆ. ಹಾಗಾಗಿ ನಿಮ್ಮನ್ನು ಆಯ್ಕೆ ಮಾಡಲಾಗುತ್ತಿಲ್ಲ’ ಎನ್ನುವ ಮಾತು ಹಲವರಿಂದ ಕೇಳಿದ್ದೇನೆ.ಈ ಮೈನಸ್‌ ಪಾಯಿಂಟ್‌ನಿಂದಾಗಿ ಸಾಕಷ್ಟು ಅವಕಾಶಗಳನ್ನೂ ಕಳೆದುಕೊಂಡಿದ್ದೇನೆ.

·ಎಲ್ಲಿ ನೆಲೆ ನಿಲ್ಲಬೇಕೆಂದುಕೊಂಡಿದ್ದೀರಿ

ಕಲೆ, ಕಲಾವಿದರಿಗೆಭಾಷೆ, ಊರಿನ ಗಡಿ ಇಲ್ಲ. ನನ್ನ ಕರಿಯರ್‌ ಎಲ್ಲಿ ಕರೆದೊಯ್ಯುತ್ತದೆಯೋ ಅಲ್ಲಿಗೆ ಪಯಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT