‘ಮೆಂಟಲ್‌’ಗೆ ಹೊಸ ಮುಹೂರ್ತ ಫಿಕ್ಸ್‌

ಸೋಮವಾರ, ಮೇ 20, 2019
30 °C

‘ಮೆಂಟಲ್‌’ಗೆ ಹೊಸ ಮುಹೂರ್ತ ಫಿಕ್ಸ್‌

Published:
Updated:
Prajavani

ಬುದ್ಧಿಮಾಂದ್ಯತೆ ಮತ್ತು ಮನೋ ವಿಕಲ್ಪದ ವಸ್ತುವನ್ನುಳ್ಳ ‘ಮೆಂಟಲ್‌ ಹೈ ಕ್ಯಾ’ ಚಿತ್ರದ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ. ಈ ಬಾರಿ ನಿಗದಿಯಾಗಿರುವಂತೆ ಜೂನ್‌ 21ರಂದು ಚಿತ್ರ ತೆರೆಗೆ ಬರುವುದು ಖಚಿತ ಎಂದು ತಿಳಿಸಿದೆ. ಈ ಚಿತ್ರದಲ್ಲಿ ‘ಕ್ವೀನ್‌’ ಜೋಡಿ ರಾಜ್‌ಕುಮಾರ್‌ ರಾವ್‌ ಮತ್ತು ಕಂಗನಾ ರನೌತ್‌ ಎರಡನೇ ಬಾರಿಗೆ ಜೊತೆಯಾಗಿ ನಟಿಸಿದ್ದಾರೆ.

ಬಿಡುಗಡೆ ದಿನಾಂಕದೊಂದಿಗೆ, ಪ್ರೇಕ್ಷಕರನ್ನು ಸಾಂತ್ವನಗೊಳಿಸುವಂತೆ ಹೊಸ ಪೋಸ್ಟರ್‌ಅನ್ನೂ ಚಿತ್ರತಂಡ ಹೊರತಂದಿದೆ. ಹರಿತವಾದ ರೇಸರ್‌ ಬ್ಲೇಡ್‌ವೊಂದನ್ನು ರಾಜ್‌ಕುಮಾರ್‌ ಮತ್ತು ಕಂಗನಾ ತಮ್ಮ ನಾಲಿಗೆಯಿಂದ ಬ್ಯಾಲೆನ್ಸ್‌ ಮಾಡುತ್ತಿರುವ ದೃಶ್ಯ ಪೋಸ್ಟರ್‌ನಲ್ಲಿದೆ. 

ಮಾರ್ಚ್‌ 29ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಪದೇ ಪದೇ ಮುಂದೂಡಿಕೆಯಾಗುತ್ತಿದೆ. ಪ್ರಕಾಶ್‌ ಕೋವೆಲಮುಡಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಮೆಂಟಲ್‌ ಹೈ ಕ್ಯಾ’ಗೆ ಶೋಭಾ ಕಪೂರ್‌, ಏಕ್ತಾ ಕಪೂರ್‌ ಮತ್ತು ಶೈಲೇಶ್‌ ಆರ್. ಸಿಂಗ್‌ ಬಂಡವಾಳ ಹೂಡಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !