ಭಾನುವಾರ, ಜೂನ್ 26, 2022
26 °C

‘ಪೂರಿಭಾಯ್‌’ ಕ್ಯಾಮೆರಾ ಮುಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂರು ಚಿತ್ರಗಳನ್ನು ನಿರ್ಮಿಸಿ ನಿರ್ದೇಶನ ಮಾಡಿರುವ ತುಮಕೂರಿನ ಪಿ.ಚಿರಂಜೀವ ನಾಯ್ಕ್ ಅವರ ಹೊಸ ಚಿತ್ರ ‘ಮೇರಾ ನಾಮ್ ಪೂರಿಭಾಯ್’ನ ಮುಹೂರ್ತ ಇತ್ತೀಚೆಗೆ ನಡೆಯಿತು.

ಕನ್ನಡ, ತೆಲುಗು ಮತ್ತು ಹಿಂದಿಯಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಎಲ್ಲಾ ಭಾಷೆಗೆ ಹೊಂದಿಕೆಯಾಗುವಂತೆ ಈ ಶೀರ್ಷಿಕೆಯನ್ನು ಇಡಲಾಗಿದೆ. ಅಲ್ಲದೆ ಕಥೆಯು ಪ್ರಾರಂಭದಲ್ಲಿ ಮುಂಬೈಯಲ್ಲಿ ನಡೆದು ತರುವಾಯ ಇಲ್ಲಿಗೆ ಬರುತ್ತದೆ. ಬೇರೆ ಸಿನಿಮಾಗಳಲ್ಲಿ ಇಲ್ಲಿಂದ ಅಲ್ಲಿಗೆ ಹೋಗಿ ಡಾನ್ ಆಗುತ್ತಾರೆ. ಆದರೆ ನಮ್ಮ ಸಿನಿಮಾದಲ್ಲಿ ಮುಂಬೈನಿಂದ ಬಂದ ಹುಡುಗನೊಬ್ಬ ಕರ್ನಾಟಕದಲ್ಲಿ ರೌಡಿಯಾಗುತ್ತಾನೆ ಎನ್ನುವುದೇ ವಿಶೇಷ. ಮುಗ್ದನಾಗಿದ್ದ ಆತನು ಇಲ್ಲಿಗೆ ಬಂದ ಮೇಲೆ ರಗಡ್ ಆಗುತ್ತಾನೆ. ಬೆಂಗಳೂರಿಗೆ ಬಂದು ಏನು ಮಾಡ್ತಾನೆ, ಹೇಗೆ ಬದಲಾವಣೆಗೊಳ್ಳುತ್ತಾನೆ  ಎಂಬುದನ್ನು ಹೇಳಲಾಗುತ್ತಿದೆ. ಒಟ್ಟಾರೆ ಮಾಸ್ ಕಮರ್ಷಿಯಲ್ ಸ್ಟೋರಿ ಇದು. ಕಥೆಯು ಕನ್ನಡ, ಹಿಂದಿಯಲ್ಲಿ ನಡೆಯಲಿರುವುದರಿಂದ ಒಂದಷ್ಟು ಸಂಭಾಷಣೆಗಳು ಹಿಂದಿಯಲ್ಲಿ ಇರುತ್ತದೆ ಎಂದು ನಿರ್ದೇಶಕ ಚಿರಂಜೀವ ನಾಯ್ಕ ಹೇಳಿದರು.

ಮಡಿಕೇರಿ, ಚಿಕ್ಕಮಗಳೂರು, ಎಚ್.ಡಿ.ಕೋಟೆ, ಹಿಮಾಲಯದಲ್ಲಿ ಚಿತ್ರೀಕರಣವನ್ನು ಎರಡು ಹಂತಗಳಲ್ಲಿ ನಡೆಸಲು ಯೋಜನೆ ಹಾಕಲಾಗಿದೆ. ಎಂ.ಎಸ್.ಉಮೇಶ್, ರಮೇಶ್‌ ಪಂಡಿತ್, ಪವಿತ್ರಾ ಲೋಕೇಶ್, ರಮೇಶ್‌ ಭಟ್ ನಟಿಸಲಿದ್ದಾರೆ ಎಂಬುದಾಗಿ ನಿರ್ದೇಶಕರು ಮಾಹಿತಿ ನಿಡಿದರು.

’ಐ1’ ಚಿತ್ರದಲ್ಲಿ ನಟಿಸಿದ್ದು ಇದೇ ಎರಡನೇ ಅವಕಾಶ. ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಮಧ್ಯಮ ವರ್ಗದ ಹುಡುಗನಾಗಿ ಕಾಲೇಜಿಗೆ ಹೋಗುವ ಮುಗ್ದ, ಹೇಗೆ ಪ್ರೀತಿಯಲ್ಲಿ ಬೀಳುತ್ತಾನೆ. ಅದಾದ ಮೇಲೆ ರೌಡಿಸಂಗೆ ಹೇಗೆ ಕನೆಕ್ಟ್ ಆಗುತ್ತಾನೆ ಎನ್ನುವ ಪಾತ್ರವೆಂದು ನಾಯಕ ಕಿಶೋರ್ ಹೇಳಿಕೊಂಡರು. ಕಾಲೇಜು ಹುಡುಗಿಯಾಗಿ ಬೆಳಗಾಂನ ವಿದ್ಯಾನಾಗಪ್ಪ ಪಾಟೀಲ್ ನಾಯಕಿಯಾಗಿ ಹೊಸ ಅನುಭವ. ಆರು ಹಾಡುಗಳಿಗೆ ಎ.ಟಿ.ರವೀಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಪೈಕಿ ಎರಡು ಹಾಡುಗಳು ಸಿದ್ಧಗೊಂಡಿದೆ. ವಿಜಯಪ್ರಕಾಶ್, ರಾಜೇಶ್‌ಕೃಷ್ಣನ್ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ಕೆ.ಸಿ.ಸಿದ್ದು ಅವರದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು