ಗಾಲಾ ಪಾರ್ಟಿಯಲ್ಲಿ ಪಿಗ್ಗಿ, ಡಿಪ್ಪಿ...

ಸೋಮವಾರ, ಮೇ 27, 2019
24 °C

ಗಾಲಾ ಪಾರ್ಟಿಯಲ್ಲಿ ಪಿಗ್ಗಿ, ಡಿಪ್ಪಿ...

Published:
Updated:
Prajavani

ಚಿತ್ರವಿಚಿತ್ರವಾಗಿ ಉಡುಗೆ ತೊಟ್ಟು ನೆರೆದವರನ್ನು ಮನರಂಜಿಸುವುದನ್ನೇ ಮುಖ್ಯ ಉದ್ದೇಶವಾಗಿರುವ  ಗಾಲಾ ಪಾರ್ಟಿಯಲ್ಲಿ ಹಾಲಿವುಡ್ ಸೆಲೆಬ್ರಿಟಿಗಳದ್ದೇ ಕಾರುಬಾರು. ನ್ಯೂಯಾರ್ಕ್‌ನಲ್ಲಿ ಈಚೆಗೆ ನಡೆದ ಮೆಟ್–ಗಾಲಾ 2019ರ ಪಾರ್ಟಿಯಲ್ಲಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕ ಚೋಪ್ರಾ ಕೂಡಾ ಭಾಗವಹಿಸಿ ರಂಗು ತುಂಬಿದರು.

ಪ್ರಿಯಾಂಕ ಗಂಡ ನಿಕ್ ಜೋನಸ್ ಜೊತೆಗೆ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದರೆ, ದೀಪಿಕಾ ಏಕಾಂಗಿಯಾಗಿಯೇ ತಿಳಿ ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ವಿಚಿತ್ರ ಹೇರ್ ಸ್ಟೈಲ್ ಮತ್ತು ಮೇಕಪ್ ಮೂಲಕ ನೆರೆದವರ ಗಮನ ಸೆಳೆದರು.

ಪ್ರಿಯಾಂಕ ಅರೆ ಪಾರದರ್ಶಕ ಉಡುಗೆ ತೊಟ್ಟು, ಸ್ಮೋಕಿ ಐ ಮೇಕಪ್ ಹಾಗೂ ಕೆದರಿದ ಕೂದಲು ವಿನ್ಯಾಸ ಮಾಡಿಸಿಕೊಂಡಿದ್ದರೆ, ನಿಕ್ ಬಿಳಿ ಸೂಟ್‌ನಲ್ಲಿ ಮಿಂಚುತ್ತಿದ್ದರು. ಚಿಗುರು ಮೀಸೆಯಲ್ಲಿ ತುಸು ಪ್ರೌಢಿಮೆಯ ಕಳೆಯೂ ಗೋಚರಿಸುತ್ತಿತ್ತು. 

ಗಾಲಾ ಪಾರ್ಟಿ ಮುಗಿದ ಬಳಿಕ ದೀಪಿಕಾ ಮತ್ತು ಪ್ರಿಯಾಂಕ ಇಬ್ಬರೂ ಜತೆಗೂಡಿ ಗ್ರೂಪ್ ಫೋಟೊಗೆ ಫೋಸ್ ಕೊಟ್ಟಿದ್ದಾರೆ. ಈ ಫೋಟೊದಲ್ಲಿ ನತಾಶ ಪೂನಂವಾಲಾ, ಅನೈತಾ ಶ್ರಾಫ್ ಅದಾಜಾನಿಯಾ, ಹುಮಾ ಅಬೆಡಿನ್ ಕೂಡಾ ಇದ್ದಾರೆ. ಈ ಚಿತ್ರವನ್ನು ಪ್ರಿಯಾಂಕ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಚಾರ್ಲಿ ಅಂಡ್ ಇಂಡಿಯನ್ ಏಂಜೆಲ್ಸ್ ಎಂಡ್ ದಿ ನೈಟ್’... ಎಂದು ಬರೆದುಕೊಂಡಿದ್ದಾರೆ. →ಪಿಗ್ಗಿ ಟ್ರೋಲ್: ಪ್ರಿಯಾಂಕ ಅವರ ಹೇರ್‌ಸ್ಟೈಲ್ ಮತ್ತು ಮೇಕಪ್ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಟ್ರೋಲ್‌ಗೆ ಕಾರಣವಾಗಿದೆ. ಪಿಗ್ಗಿ ಹೇರ್ ಸ್ಟೈಲ್ ಅನ್ನು ವೀರಪ್ಪನ್ ಮೀಸೆ, ಸೆಂಟರ್ ಫ್ರೆಶ್ ಬಬಲ್ ಗಮ್, ಕ್ರಿಕೆಟಿಗರ ಕೇಶವಿನ್ಯಾಸಕ್ಕೆ ಹೋಲಿಸಿ ಟ್ರೋಲ್ ಮಾಡಲಾಗಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !