ಭಾನುವಾರ, ಮೇ 29, 2022
21 °C

ಶ್ರೀದೇವಿ 2ನೇ ಪುಣ್ಯತಿಥಿಗೆ ಪುತ್ರಿ ಜಾಹ್ನವಿಯಿಂದ 'ಮಿಸ್‌ ಯು' ಫೋಟೊ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ‘ಅಮ್ಮ ನಿನ್ನ ಪ್ರತಿ ದಿನ ಮಿಸ್‌ ಮಾಡಿಕೊಳ್ಳುತ್ತೇನೆ' ಎಂದು ದಿವಂಗತ ನಟಿ  ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಶ್ರೀದೇವಿ ಅವರ 2ನೇ ಪುಣ್ಯತಿಥಿ ದಿನವಾದ ಇಂದು ಜಾಹ್ನವಿ ಕಪೂರ್‌ ಅವರು, ಶ್ರೀದೇವಿ ಜೊತೆಗಿರುವ ಒಂದು ಫೋಟೊವನ್ನು ಹಂಚಿಕೊಂಡು ‘ಅಮ್ಮ ನಿನ್ನ ಪ್ರತಿ ದಿನ ಮಿಸ್‌ ಮಾಡಿಕೊಳ್ಳುತ್ತಿರುವೆ‘ ಎಂದು ಬರೆದುಕೊಂಡಿದ್ದಾರೆ. ಮನಕರಗುವ ಈ ಪೋಸ್ಟ್‌ ಅನ್ನು 5 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದು 5 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್‌ ಹಾಕಿದ್ದಾರೆ.

 
 
 
 

 
 
 
 
 
 
 
 
 

Miss you everyday

A post shared by Janhvi Kapoor (@janhvikapoor) on

2018ರಲ್ಲಿ ಶ್ರೀದೇವಿ ದುಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಆಗ ಅವರಿಗೆ 54 ವರ್ಷ ವಯಸ್ಸಾಗಿತ್ತು. ಶ್ರೀದೇವಿಗೆ ಜಾಹ್ನವಿ ಮತ್ತು ಖುಷಿ ಎಂಬ ಇಬ್ಬರು ಪುತ್ರಿಯರಿದ್ದಾರೆ. ಜಾಹ್ನವಿ ಕಪೂರ್‌ ಬಾಲಿವುಡ್‌ನ ‘ದಡಕ್‌‘ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಚೊಚ್ಚಲ ಚಿತ್ರದಲ್ಲಿಯೇ ಉತ್ತಮ ನಟನೆಗಾಗಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

ನೆಟ್‌ಫ್ಲಿಕ್ಸ್‌ನ ‘ಗೋಸ್ಟ್‌ ಸ್ಟೋರಿಸ್‌‘ನಲ್ಲೂ ಅಭಿನಯಿಸಿದ್ದಾರೆ. ಇದೀಗ ಜಾಹ್ನವಿ, ಗುಂಜಾನ್‌ ಸಕ್ಸೆನಾ, ರೂಹಿಆಫ್ಜಾ ಹಾಗೂ ದೋಸ್ತಾನ2 ಸೇರಿದಂತೆ ನಾಲ್ಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

5 ದಶಕಗಳ ಕಾಲ ತೆಲುಗು, ತಮಿಳು ಸೇರಿದಂತೆ ಬಾಲಿವುಡ್‌ನ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಶ್ರೀದೇವಿ ಅಭಿನಯಿಸಿದ್ದಾರೆ. ಬಾಲಿವುಡ್‌ನ ‘ಮಾಮ್‌‘ ಶ್ರೀದೇವಿ ನಟಿಸಿದ ಕೊನೆಯ ಚಿತ್ರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು