ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗಿ ಪ್ರೇಮ್‌ ಚಿತ್ರದಲ್ಲಿ ಸಂಜಯ್‌ದತ್‌, ಮೋಹನ್‌ಲಾಲ್‌ ನಟನೆ?

Last Updated 12 ಅಕ್ಟೋಬರ್ 2022, 8:38 IST
ಅಕ್ಷರ ಗಾತ್ರ

ನಿರ್ದೇಶಕ ಜೋಗಿ ಪ್ರೇಮ್‌ ಈ ಹಿಂದೊಮ್ಮೆ ಬೇರೆ, ಬೇರೆ ಭಾಷೆಗಳ 6 ದೊಡ್ಡ ನಟರನ್ನು ಒಟ್ಟಾಗಿಸಿ ಸಿನಿಮಾ ಮಾಡುವ ಕುರಿತು ಹೇಳಿದ್ದರು. ಆದರೆ ಅವರ ಆ ಕನಸು ನನಸಾಗಲಿಲ್ಲ. ನಂತರ ‘ಏಕ್‌ ಲವ್ ಯಾ' ಚಿತ್ರ ಮಾಡಿದ್ದ ಪ್ರೇಮ್‌, ಈಗ ಧ್ರುವ ಸರ್ಜಾ ಅವರ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಗ್ನರಾಗಿದ್ದಾರೆ. ಈ ಸಿನಿಮಾವನ್ನು ಬಹುಭಾಷಾ ನಾಯಕರ ಸಿನಿಮಾವಾಗಿಸಲು ಪ್ರೇಮ್‌ ಯೋಚಿಸುತ್ತಿದ್ದಾರಾ?

ಅಭಿಮಾನಿಗಳಲ್ಲಿ ಹೀಗೊಂದು ಪ್ರಶ್ನೆ ಮೂಡಲು ಕಾರಣ ಅವರ ಇತ್ತೀಚಿನ ಇನ್‌ಸ್ಟಾಗ್ರಾಂ ಚಿತ್ರಗಳು. ‌ಬಾಲಿವುಡ್‌ನ ಜನಪ್ರಿಯ ನಟ ಸಂಜಯ್‌ದತ್‌ ಹಾಗೂ ಮಲಯಾಳದ ಬಿಗ್‌ ಬ್ರದರ್‌ ಮೋಹನ್‌ ಲಾಲ್‌ ಅವರನ್ನು ಪ್ರೇಮ್‌ ಭೇಟಿಯಾಗಿ ಬಂದಿದ್ದಾರೆ. ಅದರ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಇದೊಂದು ಅತ್ಯಂತ ಸಂತಸದ ಕ್ಷಣ. ಸಂಜಯ್‌ ದತ್‌ ಅವರನ್ನು ಭೇಟಿ ಮಾಡುವುದು ಎಂದಿಗೂ ಅತ್ಯುತ್ಸಾಹದ ಸಂಗತಿ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು’ ಎಂದು ಪ್ರೇಮ್‌ ಬರೆದುಕೊಂಡಿದ್ದಾರೆ.

‘ಈಗ ನನಗೆ ಏನಾಗುತ್ತಿದೆ ಎಂದು ವರ್ಣಿಸಲು ಸಾಧ್ಯವಾಗುತ್ತಿಲ್ಲ. ಮೋಹನ್‌ ಲಾಲ್‌ ಭಾರತೀಯ ಸಿನಿಮಾ ರಂಗದ ಸೂಪರ್‌ಸ್ಟಾರ್‌. ಜೊತೆಗೆ ಅತ್ಯಂತ ಸರಳ ವ್ಯಕ್ತಿ’ ಎಂಬುದಾಗಿ ಮೋಹನ್‌ ಲಾಲ್‌ ಕುರಿತು ವರ್ಣಿಸಿದ್ದಾರೆ. ಕೆವಿಎನ್‌ ಪ್ರೊಡಕ್ಷನ್‌ 4 ಟೈಟಲ್‌ ಟೀಸರ್‌ ಅ.20ಕ್ಕೆ ಬಿಡುಗಡೆ ಎಂಬುದಾಗಿಯೂ ಆ ಪೋಸ್ಟ್‌ನಲ್ಲಿ ನಮೂದಿಸಿದ್ದಾರೆ.

ನಟ ಧ್ರುವ ಸರ್ಜಾಗೆ ಕೆವಿಎನ್‌ ಪ್ರೊಡಕ್ಷನ್‌ ಅಡಿಯಲ್ಲಿ ನಿರ್ಮಿಸುತ್ತಿರುವುದು ಬಿಗ್ ಬಜೆಟ್ ಸಿನಿಮಾ. 70ರ ದಶಕದ ಕಥೆಯುಳ್ಳ ಚಿತ್ರಕ್ಕೆ ಈಗಾಗಲೇ ಭರ್ಜರಿ ಸೆಟ್‌ನ ಸಿದ್ಧತೆ ನಡೆದಿದೆ. ಹೀಗಾಗಿ ಈ ಚಿತ್ರದಲ್ಲಿ ಸಂಜಯ್‌ ದತ್‌ ಹಾಗೂ ಮೋಹನ್‌ ಲಾಲ್‌ ಒಂದೊಂದು ಪಾತ್ರ ನಿರ್ವಹಿಸಲಿದ್ದಾರಾ? ಅಥವಾ ಟೈಟಲ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರಾ ಎಂಬ ಕುರಿತು ಸ್ಪಷ್ಟನೆ ದೊರೆತಿಲ್ಲ.

ಸಂಜಯ್‌ ದತ್‌ ಚಿತ್ರದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಆದರೆ ಮೋಹನ್‌ ಲಾಲ್‌ ನಟಿಸುವ ಬಗ್ಗೆ ಖಚಿತವಾಗಿಲ್ಲ ಎನ್ನಲಾಗುತ್ತಿದೆ. ಜೋಗಿ ಪ್ರೇಮ್‌ ಯಾವುದೇ ಸಿನಿಮಾ ಮಾಡಿದರೂ, ಸದ್ದುಗದ್ದಲಕ್ಕೆ ಕೊರತೆ ಇರುವುದಿಲ್ಲ. ಅ.20ರಂದು ಸಂಜೆ ಶೀರ್ಷಿಕೆ ಟೀಸರ್‌ ಬಿಡುಗಡೆಗೊಳ್ಳುತ್ತಿದ್ದು, ಅದರ ನಂತರವೇ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT