ನವದೆಹಲಿ: ಹಲವು ಭಾಷೆಗಳಲ್ಲಿ ರೀಮೇಕ್ ಆದ ಬ್ಲಾಕ್ ಬಸ್ಟರ್ ಮಲಯಾಳಂ ಚಿತ್ರ ದೃಶ್ಯಂ ಭಾಗ–1 ಮತ್ತು ಭಾಗ–2ರ ಬಳಿಕ ಭಾಗ–3ಕ್ಕೆ ವೇದಿಕೆ ಸಜ್ಜಾಗಿದೆ. ಮೊದಲೆರಡು ಭಾಗಗಳನ್ನು ನಿರ್ದೇಶಿಸಿದ್ದ ನಿರ್ದೆಶಕ ಜೀತು ಜೋಸೆಫ್ ಅವರೇ ಈ ಚಿತ್ರವನ್ನೂ ನಿರ್ದೆಶಿಸುತ್ತಿದ್ದಾರೆ ಎಂದು ನಟ ಮೋಹನ್ ಲಾಲ್ ಖಚಿತಪಡಿಸಿದ್ದಾರೆ.

ತಮ್ಮ ಮುಂದಿನ ಚಿತ್ರ‘ ಎಲ್–2: ಎಂಪುರಾನ್’ ಬಿಡುಗಡೆಗೆ ಕಾಯುತ್ತಿರುವ ಮೋಹನ್ ಲಾಲ್, ತಮ್ಮ ಎಕ್ಸ್ ಖಾತೆಯಲ್ಲಿ ‘ದೃಶ್ಯಂ–3’ ಘೋಷಣೆ ಮಾಡಿದ್ದಾರೆ.

‘ಇತಿಹಾಸ ಎಂದಿಗೂ ಸುಮ್ಮನಿರಲಾರದು... ದೃಶ್ಯಂ–3 ಖಚಿತಪಟ್ಟಿದೆ!’ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ದೃಶ್ಯಂನ ಎರಡೂ ಭಾಗಗಳಲ್ಲಿ ಜಾರ್ಜ್ ಕುಟ್ಟಿ ಪಾತ್ರದಲ್ಲಿ ಮೋಹನ್ ಲಾಲ್ ಕಾಣಿಸಿಕೊಂಡಿದ್ದು, ತಮ್ಮ ಮಗಳ ಮೇಲೆ ಕಣ್ಣು ಹಾಕಿದ ಐಜಿಪಿ ಮಗನ ಹತ್ಯೆ ಮತ್ತು ಅದನ್ನು ಮುಚ್ಚಿಡುವ, ಕುಟುಂಬವನ್ನು ರಕ್ಷಿಸುವ ಕಥಾಹಂದರವನ್ನು ಒಳಗೊಂಡಿವೆ.

ಆಂಟೋನಿ ಪೆರುಂಬವೂರ್ ಈ ಚಿತ್ರಗಳಿಗೆ ಹಣ ಹೂಡಿದ್ದು, ಆಶೀರ್ವಾದ್ ಸಿನಿಮಾಸ್ ಬ್ಯಾನರ್ ಅಡಿ ಚಿತ್ರಗಳು ನಿರ್ಮಾಣವಾಗಿದ್ದವು.

2013ರಲ್ಲಿ ತೆರೆಕಂಡ ಮೊದಲ ಭಾಗ ಮತ್ತು 2022ರಲ್ಲಿ ತೆರೆಕಂಡ ಎರಡನೇ ಭಾಗದ ಚಿತ್ರಗಳು ಸೂಪರ್ ಹಿಟ್ ಆಗಿದ್ದವು.

ಈ ಅದ್ಭುತ ಯಶಸ್ಸು ಕಂಡ ದೃಶ್ಯಂ ಚಿತ್ರಗಳು ಹಿಂದಿ, ತೆಲುಗು, ಕನ್ನಡ, ಚೈನೀಸ್(ಮ್ಯಾಂಡರೀನ್) ಮತ್ತು ಸಿಂಹಳಿ ಭಾಷೆಯಲ್ಲಿ ರೀಮೇಕ್ ಆಗಿವೆ. ಕನ್ನಡದಲ್ಲಿ ವಿ. ರವಿಚಂದ್ರನ್, ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ಮತ್ತು ಹಿಂದಿಯಲ್ಲಿ ಅಜಯ್ ದೇವಗನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.