ಇತ್ತೀಚೆಗೆ ವಿಭಿನ್ನ ಕಥಾ ಹಂದರದ ಮೂಲಕ ಸದ್ದು ಮಾಡಿದ್ದ ದುಲ್ಕರ್ ಸಲ್ಮಾನ್ ನಟನೆಯ ಸೀತಾ ರಾಮಂ ಸಿನಿಮಾದಲ್ಲಿ ನಟಿ ಮೃಣಾಲ್ ಠಕೂರ್ ಮಿಂಚಿದ್ದರು.
–ಮೃಣಾಲ್ ಠಾಕೂರ್ ಇನ್‌ಸ್ಟಾ
ADVERTISEMENT
ಇದರಲ್ಲಿ ಸೀತಾ ಪಾತ್ರದಲ್ಲಿ ಸಂಪ್ರದಾಯ ಬದ್ದಳಾಗಿ ಕಾಣಿಸಿಕೊಂಡಿದ್ದ ನಟಿ ಇತ್ತೀಚಿಗೆ ಸಡಿಲ ಉಡುಪು ತೊಟ್ಟು ಹಾಟ್ ಅವತಾರದಲ್ಲಿ ದರ್ಶನ ನೀಡಿದ್ದಾರೆ.
–ಮೃಣಾಲ್ ಠಾಕೂರ್ ಇನ್‌ಸ್ಟಾ
ಮೃಣಾಲ್ ಠಾಕೂರ್ ಅವರ ಈ ಬೋಲ್ಡ್ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿವೆ. ಅಭಿಮಾನಿಗಳು ಇದೇಕೋ ಅತಿ ಆಯಿತೆಂದು ಉದ್ಘಾರ ತೆಗೆದಿದ್ದಾರೆ. ಸೀತಾ ರಾಮಂ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೃಣಾಲ್ ಗಮನ ಸೆಳೆದಿದ್ದರು.
–ಮೃಣಾಲ್ ಠಾಕೂರ್ ಇನ್‌ಸ್ಟಾ
ಇನ್‌ಸ್ಟಾಗ್ರಾಂನಲ್ಲಿ ಮೃಣಾಲ್ ಈ ಚಿತ್ರಗಳನ್ನು ಹಂಚಿಕೊಂಡಿದ್ದು ಅವರು ಇತ್ತೀಚೆಗೆ ವಿದೇಶ ಪ್ರವಾಸ ಹೋದಾಗಿನ ಚಿತ್ರಗಳು ಇವಾಗಿವೆ.
–ಮೃಣಾಲ್ ಠಾಕೂರ್ ಇನ್‌ಸ್ಟಾ
ಮಹಾರಾಷ್ಟ್ರ ಮೂಲದ ಈ ಬಾಲಿವುಡ್ ನಟಿಗೆ ಇದೀಗ ದಕ್ಷಿಣ ಸಿನಿಮಾರಂಗದಲ್ಲಿ ಸಾಕಷ್ಟು ಅವಕಾಶಗಳಿವೆ. ಸಾಲು ಸಾಲು ಸಿನಿಮಾಗಳಲ್ಲಿ ಮೃಣಾಲ್ ಬ್ಯುಸಿಯಾಗಿದ್ದಾರೆ. ಅವರ ಅಭಿನಯದ ಪೂಜಾ ಮೇರಿ ಜಾನ್, ಪಿಪ್ಪಾ ಸಿನಿಮಾಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.