ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಕ್ತ ಮನಸು’ ಚಿತ್ರದ ಟ್ರೇಲರ್ ಬಿಡುಗಡೆ

Published 31 ಮಾರ್ಚ್ 2024, 12:48 IST
Last Updated 31 ಮಾರ್ಚ್ 2024, 12:48 IST
ಅಕ್ಷರ ಗಾತ್ರ

ಬಹುತೇಕ ಹೊಸಬರೇ ಸೇರಿಕೊಂಡು ನಿರ್ಮಿಸಿರುವ ‘ಮುಕ್ತ ಮನಸು’ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಗೊಂಡಿವೆ. ಆರ್.ಸಿ.ರಂಗಶೇಖರ್ ಬರೆದು, ನಿರ್ದೇಶಿಸಿರುವ ಚಿತ್ರಕ್ಕೆ ಮೈಸೂರು ಮೂಲದ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. 

‘ನಾನು ರಂಗಭೂಮಿ ಕಲಾವಿದ. 25 ವರ್ಷಗಳ ಕಾಲ ರಂಗಾಯಣದಲ್ಲಿ ಕೆಲಸ ಮಾಡಿದ್ದೇನೆ. ಬಳಿಕ ಸಿನಿಮಾ ನಿರ್ದೇಶನ ತರಬೇತಿ ಮುಗಿಸಿರುವೆ. ಪ್ರೇಮಿಗಳು ಯಾರೇ ಆಗಿರಲಿ, ಯಾವುದೇ ರೀತಿಯ ಕಲ್ಮಶ ಇಲ್ಲದ ಪ್ರೀತಿಯು ಕೊನೆತನಕ ಉಳಿಯುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ’ ಎಂದರು ನಿರ್ದೇಶಕರು.

ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ಮೋಹನ್‌ ರಂಗನಾಥ್‌ ಚಿತ್ರದ ನಾಯಕ. ಕ್ಲಾಸಿಕಲ್‌ ಡ್ಯಾನ್ಸರ್‌ ಆಗಿರುವ ಮಾನ್ಯಗೆ ನಾಯಕಿಯಾಗಿ ಮೂರನೇ ಚಿತ್ರವಿದು. ಶೋಭರಾಜ್, ರಮೇಶ್‌ ಪಂಡಿತ್, ಅಪರ್ಣ ಮುಂತಾದವರು ಚಿತ್ರದಲ್ಲಿದ್ದಾರೆ. ಐದು ಹಾಡುಗಳಿಗೆ ವಿನುಮನಸು ಸಂಗೀತ ಸಂಯೋಜಿಸಿದ್ದಾರೆ. ರವಿ ಛಾಯಾಚಿತ್ರಗ್ರಹಣವಿದೆ. ಮೈಸೂರು, ಮಂಡ್ಯಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರ ಬಿಡುಗಡೆಗೆ ಸಿದ್ಧವಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT