ಭಾನುವಾರ, ಏಪ್ರಿಲ್ 18, 2021
31 °C

ಆ. 2ಕ್ಕೆ ‘ಮುನಿರತ್ನ ಕುರುಕ್ಷೇತ್ರ’ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ದರ್ಶನ್ ನಟನೆಯ 50ನೇ ಸಿನಿಮಾ, ‘ಮುನಿರತ್ನ ಕುರುಕ್ಷೇತ್ರ’ ಆಗಸ್ಟ್ 2ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಈ ಮೊದಲು ವರಮಹಾಲಕ್ಷ್ಮಿ ಹಬ್ಬದಂದು ಅಂದರೆ ಆಗಸ್ಟ್‌ 9ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಈಗ ಒಂದು ವಾರ ಮುಂಚಿತವಾಗಿಯೇ ಈ ಸಿನಿಮಾ ತೆರೆಗೆ ಬರುತ್ತಿದೆ. ಇದನ್ನು ಚಿತ್ರತಂಡ ಟ್ವಿಟರ್‌ನಲ್ಲೂ ಅಧಿಕೃತವಾಗಿ ಪ್ರಕಟಿಸಿದೆ.

ಅಲ್ಲದೆ, ಅಭಿಮಾನಿಗಳ ಒತ್ತಾಸೆ ಮೇರೆಗೆ ಈ ಚಿತ್ರದ ಮತ್ತೊಂದು ಟ್ರೇಲರ್‌ ಅನ್ನು ಬುಧವಾರ ಮಧ್ಯಾಹ್ನ 2 ಗಂಟೆಗೆ ಬಿಡುಗಡೆ ಮಾಡಲಾಗುವುದು ಎಂದು ನಟ ದರ್ಶನ್ ಟ್ವೀಟ್‌ ಮಾಡಿದ್ದಾರೆ.

ಈ ಸಿನಿಮಾ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳ ಭಾಷೆಯಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ತೆರೆಕಾಣಲಿದೆ. ಚಿತ್ರದ ಕಾಲಾವಧಿ 2 ಗಂಟೆ 55 ನಿಮಿಷ ಇದೆ. 

ಇದು ಬಹುತಾರಾಗಣದ ಚಿತ್ರವಾಗಿದ್ದು, ದರ್ಶನ್ (ದುರ್ಯೋಧನ), ಅಂಬರೀಷ್‌ (ಭೀಷ್ಮ), ಅರ್ಜುನ್ ಸರ್ಜಾ (ಕರ್ಣ), ರವಿಚಂದ್ರನ್ (ಕೃಷ್ಣ), ಶಶಿಕುಮಾರ್ (ಧರ್ಮರಾಯ), ಡ್ಯಾನಿಶ್ ಅಖ್ತರ್ (ಭೀಮ), ಸೋನು ಸೂದ್ (ಅರ್ಜುನ), ಯಶಸ್ ಸೂರ್ಯ (ನಕುಲ), ಚಂದನ್ (ಸಹದೇವ), ನಿಖಿಲ್ ಕುಮಾರಸ್ವಾಮಿ (ಅಭಿಮನ್ಯು), ರವಿಶಂಕರ್ (ಶಕುನಿ), ಭಾರತಿ (ಕುಂತಿ), ಸ್ನೇಹಾ (ದ್ರೌಪದಿ), ರಾಕ್‌ಲೈನ್ ವೆಂಕಟೇಶ್ (ಶಲ್ಯ), ರಮೇಶ್ ಭಟ್ (ವಿದುರ), ಶ್ರೀನಿವಾಸ ಮೂರ್ತಿ (ದ್ರೋಣಾಚಾರ್ಯ), ಶ್ರೀನಾಥ್ (ಧೃತರಾಷ್ಟ್ರ), ರವಿಚೇತನ್‌ (ದುಶ್ಯಾಸನ), ಅವಿನಾಶ್ (ಗಂಧರ್ವರಾಜ), ಪವಿತ್ರಾ ಲೋಕೇಶ್ (ಸುಭದ್ರಾ) ಹರಿಪ್ರಿಯಾ ನಟಿಸಿದ್ದಾರೆ.

 

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.