ಗುರುವಾರ , ಏಪ್ರಿಲ್ 22, 2021
22 °C

ಸುಪ್ರಸಿದ್ಧ ಮುಕಾಬಲಾ ಹಾಡಿಗೆ ಮರುಜೀವ: ಮತ್ತೆ ಕಂಪನ ಸೃಷ್ಟಿಸಿದ ಪ್ರಭು ದೇವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎ.ಆರ್ ರೆಹಮಾನ್ ಸಂಗೀತ ಸಂಯೋಜನೆಯ ಐಕಾನಿಕ್ ಹಾಡು ‘ಮುಕಾಬುಲಾ‘ಗೆ  ಮತ್ತೆ ಜೀವ ನೀಡಲಾಗಿದ್ದು, ಸ್ಟ್ರೀಟ್ ಡ್ಯಾನ್ಸರ್ 3ಡಿ ಸಿನಿಮಾದಲ್ಲಿ ಮರು ಸೃಷ್ಟಿ ಮಾಡಲಾಗಿದೆ. ಖ್ಯಾತ ನೃತ್ಯ ಸಂಯೋಜಕ ಪ್ರಭು ದೇವ, ವರುಣ್‌ ದವನ್‌ ಮತ್ತು ಶೃದ್ಧಾ ಕಪೂರ್‌ ಈ ಸುಪ್ರಸಿದ್ಧ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರ ಎದೆ ಬಡಿತದಲ್ಲಿ ಕಂಪನ ಸೃಷ್ಟಿಸಿದ್ದಾರೆ.  

1994ರಲ್ಲಿ ಬಿಡುಗಡೆಗೊಂಡಿದ್ದ, ಪ್ರಭು ದೇವ ನಟನೆಯ ಕಾದಲನ್‌ (ಹಿಂದಿಯಲ್ಲಿ ಹಮ್‌ ಸೆ ಹೈ ಮುಕಾಬಲಾ) ಸಿನಿಮಾದ ಹಾಡು ದೇಶದಾದ್ಯಂತ ಜನ ಮನಸೂರೆಗೊಂಡಿತ್ತು. ಈ ಹಾಡನ್ನು ಹಿಂದಿಯ ಸ್ಟ್ರೀಟ್ ಡ್ಯಾನ್ಸರ್ 3ಡಿ ಸಿನಿಮಾದಲ್ಲಿ ಮರು ಸೃಷ್ಟಿಸಲಾಗಿದ್ದು ಶನಿವಾರ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. 

ಮೈನವೀರೆಳಿಸುವ ಸಂಗೀತ, ಹುಚ್ಚೆಬ್ಬಿಸುವ ಕುಣಿತ ಮತ್ತು ಜಗಮಗಿಸುವ ಛಾಯಾಗ್ರಹಣ ನೋಡುಗರರನ್ನು ಬೆರಗಾಗಿಸಿದೆ.   

ಸ್ಟ್ರೀಟ್ ಡ್ಯಾನ್ಸರ್ 3ಡಿ ಸಿನಿಮಾದ ಮುಕಬಲಾ ಹಾಡಿಗೆ ತನಿಷ್ಕ್ ಬಗ್ಚಿ ಸಂಗೀತ ನೀಡಿದ್ದರೆ, ಯಶ್‌ ನಾರ್ವೆಕರ್‌ ಮತ್ತು ಪರಂಪರಾ ಠಾಕೂರ್‌ ಅವರ ಹಿನ್ನೆಲೆ ಧ್ವನಿಯಿದೆ. 

ಈ ಸಿನಿಮಾವನ್ನು ರೆಮೊ ಡಿಸೋಜಾ ನಿರ್ದೇಶನ ಮಾಡಿದ್ದಾರೆ. ಭುಷನ್‌ ಕುಮಾರ್‌ ನಿರ್ಮಾಣದ ಚಿತ್ರವು ಜನವರಿ 24ರಂದು ತೆರೆಕಾಣಲಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು