ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ನಿರ್ದೇಶಕ ಮನೋರಂಜನ್‌ ಪ್ರಭಾಕರ್‌ ನಿಧನ

Last Updated 14 ಡಿಸೆಂಬರ್ 2022, 18:42 IST
ಅಕ್ಷರ ಗಾತ್ರ

ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಮನೋರಂಜನ್‌ ಪ್ರಭಾಕರ್‌ ಅವರು ಬುಧವಾರ ನಿಧನರಾದರು. ಅವರು ಕೆಲಕಾಲದಿಂದ ಅನಾರೋಗ್ಯ ದಿಂದ ಬಳಲುತ್ತಿದ್ದರು.

ಅವರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಗುರುವಾರ (ಡಿ.15)ನಡೆಯಲಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಸಂಗೀತ ಪರಂಪರೆಯ ಕುಟುಂಬ ದಲ್ಲಿ ಜನಿಸಿದ್ದ (ತಂದೆ ಪಂಡಿತ್‌ ಬಿ.ಎನ್‌. ಪಾರ್ಥಸಾರಥಿ ನಾಯ್ಡು, ತಾಯಿ ಗೋವಿಂದಮ್ಮ) ಅವರು 70ರ ದಶಕದ ಆರಂಭದಲ್ಲಿ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು. ಮನೋರಂಜನ್‌ ಮತ್ತು ತಂಡ ಹೆಸರಿನಲ್ಲಿ ಕಾರ್ಯಕ್ರಮ ನೀಡುತ್ತಿದ್ದರು. 1980ರ ಅವಧಿಯಲ್ಲಿ ಇದು ಹೆಸರಾಂತ ತಂಡವಾಗಿತ್ತು. ಅವರು ಸುಮಾರು 800ಕ್ಕೂ ಹೆಚ್ಚು ಸಂಗೀತ ಆಲ್ಬಂ ಹೊರತಂದಿದ್ದಾರೆ.

90ರ ದಶಕದಲ್ಲಿ ಅವರು ಕೆಲಕಾಲ ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಶಿಕ್ಷಕರಾಗಿದ್ದರು. 2003ರಲ್ಲಿ ತಮ್ಮದೇ ಆದ ಶ್ರುತಿಲಯ ಕಲ್ಚರಲ್‌ ಅಕಾಡೆಮಿ, ಶ್ರುತಿಲಯ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯೂಸಿಕ್‌ ಮೂಲಕ ಸಂಗೀತಾಸಕ್ತರಿಗೆ ತರಬೇತಿ ನೀಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT