ಶುಕ್ರವಾರ, ಫೆಬ್ರವರಿ 21, 2020
29 °C

'V' ಫಸ್ಟ್‌ಲುಕ್‌: ನ್ಯಾಚುರಲ್‌ ಸ್ಟಾರ್ 'ನಾನಿ' ಆಘಾತಗೊಂಡಿರುವುದು ಯಾಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಟಾಲಿವುಡ್‌ನ ನ್ಯಾಚುರಲ್‌ ಸ್ಟಾರ್‌ ನಾನಿ ಈಗ 'ವಿ' ಸಿನಿಮಾದ ನಾಯಕ. ಇದರ ಫಸ್ಟ್‌ಲುಕ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗ್ಯಾಂಗ್‌ಲೀಡರ್‌ ಸಿನಿಮಾದ ಬಳಿಕ ನಾನಿ 'ವಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾನಿ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಹುರಿ ಮೀಸೆ ಬಿಟ್ಟು, ಗಡ್ಡದಾರಿಯಾಗಿ, ಕೈಯಲ್ಲಿ ಕತ್ತರಿ ಹಿಡಿದು, ಮುಂಗೈಯಲ್ಲಿ ರಕ್ತ ಸೋರುತ್ತಿದ್ದರೂ ಲಕ್ಷ್ಯವಿಲ್ಲದೇ ಆಘಾತಕ್ಕೆ ಒಳಗಾದವರಂತೆ ನಾನಿ ಫಸ್ಟ್‌ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 'ವಿ' ಸಿನಿಮಾ ಖಂಡಿತವಾಗಿಯೂ
ಕಾಮಿಡಿ, ಸಸ್ಪೆನ್ಸ್‌, ಥ್ರಿಲ್ಲರ್‌, ಹಾರಾರ್‌ ತುಂಬಿರುವ ಸಿನಿಮಾ ಎಂದು ನಾನಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ. 

ದಿಲ್‌ ರಾಜು ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಮೋಹನ್‌ ಕೃಷ್ಣ ಇಂದ್ರಗಂಟಿ ನಿರ್ದೇಶನ ಮಾಡಿದ್ದಾರೆ. ಅಮಿತ್‌ ತ್ರಿವೇದಿ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ನಿವೇತಾ ಥಾಮಸ್‌, ಅದಿತಿ ರಾವ್‌ ಹೈದರಿ ಹಾಗೂ ಸುದೀರ್‌ ಬಾಬು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. 

'ವಿ' ಸಿನಿಮಾ ಫಸ್ಟ್‌ಲುಕ್‌ನಲ್ಲಿ ನಾನಿ ಒಳ್ಳೆಯ ರಾಕ್ಷಸನ ರೀತಿಯಲ್ಲಿ ಕಾಣುತ್ತಿದ್ದಾರೆ ಎಂದು ನಿರ್ದೇಶಕ ಇಂದ್ರಗಂಟಿ ಟ್ವೀಟ್‌ ಮಾಡಿದ್ದಾರೆ. ಟಾಲಿವುಡ್‌ನಲ್ಲಿ ಕುತೂಹಲ ಮೂಡಿಸಿರುವ ಈ ಸಿನಿಮಾ ಮಾರ್ಚ್‌ ತಿಂಗಳಲ್ಲಿ ತೆರೆಗೆ ಬರಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು