ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನೊಂಥರ’ ಡಿಫರೆಂಟ್ ಕಥೆ

Last Updated 2 ಮಾರ್ಚ್ 2020, 19:30 IST
ಅಕ್ಷರ ಗಾತ್ರ

‘ಪ್ರೇಮ ವೈಫಲ್ಯ ಅನುಭವಿಸಿದ ನಂತರ ಮದ್ಯದ ಮೊರೆ ಹೋಗುವುದು ಸಿನಿಮಾ ಕಥೆಗಳಲ್ಲಿ ಸಾಮಾನ್ಯ. ಆದರೆ, ನಮ್ಮ ಸಿನಿಮಾದಲ್ಲಿ ಮದ್ಯಪಾನ ಆರಂಭಿಸಿದ ನಂತರ ನಾಯಕನ ಜೀವನದಲ್ಲಿ ಪ್ರೀತಿಯ ಪ್ರವೇಶ ಆಗುತ್ತದೆ...’

–ಈ ಮಾತು ಹೇಳಿ ತಮ್ಮ ಸಿನಿಮಾ ಇತರ ಚಿತ್ರಗಳಿಗಿಂತ ಭಿನ್ನ ಎಂದರು ನಿರ್ದೇಶಕ ರಮೇಶ್ ಕಗ್ಗಲ್ಲು. ರಮೇಶ್ ಅವರು ‘ನಾನೊಂಥರ’ ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಮೇಕಿಂಗ್‌ನ ಕೆಲವು ದೃಶ್ಯಗಳನ್ನು ತೋರಿಸಿ, ಸಿನಿಮಾ ಬಗ್ಗೆ ಮಾಹಿತಿ ನೀಡಲು ಅವರು ಕುಳಿತಿದ್ದರು.

‘ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲರ ಕಣ್ಣಲ್ಲೂ ನೀರು ಜಿನುಗುವುದು ಖಂಡಿತ’ ಎಂದು ತಮ್ಮ ಸಿನಿಮಾ ಬಗ್ಗೆ ವಿಶ್ವಾಸದಿಂದ ಹೇಳಿದರು.

‘ನಾನೊಂಥರ ಅಂದರೆ, ನಾನು ಇತರರಿಗಿಂತ ಭಿನ್ನ ಎಂಬ ಅರ್ಥವಿದೆ. ನಾನು ನಿಭಾಯಿಸಿರುವ ಪಾತ್ರ ಕೂಡ ಈ ಮಾತಿಗೆ ಸರಿಹೊಂದುವಂತೆ ಇದೆ. ಆದರೆ ಈ ಪಾತ್ರ ಒಳ್ಳೆಯತನ ತುಂಬಿಕೊಂಡಿರುವಂಥದ್ದೋ ಅಥವಾ ಕೆಟ್ಟದ್ದೋ ಎಂಬುದು ಸಸ್ಪೆನ್ಸ್’ ಎಂದರು ಚಿತ್ರದ ನಾಯಕ ತಾರಕ್ ವಿ. ಶೇಖರಪ್ಪ.

ತಾರಕ್ ಅವರಿಗೆ ಇದು ಮೂರನೆಯ ಸಿನಿಮಾ. ಈ ಚಿತ್ರದ ಕುರಿತ ಆಲೋಚನೆಗಳು ಮೊಳಕೆಯೊಡೆದಿದ್ದು ಎರಡು ವರ್ಷಗಳ ಹಿಂದೆ. ಚಿತ್ರದ ಕಥೆ ಕೇಳಿದ ನಿರ್ಮಾಪಕಿ ಜಾಕ್ಲೈನ್‌ ಫರ್ನಾಂಡೀಸ್ ಅವರು ಹಣ ಹೂಡಿಕೆ ಮಾಡಲು ತಕ್ಷಣವೇ ಒಪ್ಪಿಕೊಂಡರಂತೆ. ನಟ ದೇವರಾಜ್ ಅವರು ಇದರಲ್ಲಿ ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ಮಾಪಕಿ ಜಾಕ್ಲೈನ್‌ ಅವರು ವೃತ್ತಿಯಿಂದ ವೈದ್ಯೆ. ಈ ಚಿತ್ರದ ಮೂಲಕ ಸಿನಿಮಾ ನಿರ್ಮಾಪಕಿ ಕೂಡ ಆಗಿದ್ದಾರೆ. ರಕ್ಷಿಕಾ ಅವರು ಇದರ ನಾಯಕಿ. ಅವರದ್ದು ಗಟ್ಟಿಗಿತ್ತಿಯ ಪಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT