ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಗಳನ್ನು ಶೌಚಾಲಯದ ಬಾಗಿಲಿನ ಹ್ಯಾಂಡಲ್‌ ಮಾಡಿಕೊಂಡಿದ್ದೇನೆ: ನಾಸೀರುದ್ದೀನ್‌ ಶಾ

Published 5 ಜೂನ್ 2023, 7:29 IST
Last Updated 5 ಜೂನ್ 2023, 7:29 IST
ಅಕ್ಷರ ಗಾತ್ರ

ತಮ್ಮ ನಟನೆಗೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಬಾಲಿವುಡ್‌ ಹಿರಿಯ ನಟ ನಾಸೀರುದ್ದೀನ್‌ ಶಾ ಇತ್ತೀಚೆಗೆ ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿಗಳ ಬಗ್ಗೆ ಮಾತನಾಡಿದ್ದಾರೆ. ಅವಾರ್ಡ್‌ಗಳನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದ ಅವರು ಫಿಲ್ಮ್‌ಫೇರ್‌ ಅವಾರ್ಡ್‌ ಅನ್ನು ತಮ್ಮ ಮನೆಯ ಶೌಚಾಲಯದ (ವಾಶ್‌ರೂಮ್‌) ಬಾಗಿಲಿಗೆ ಹ್ಯಾಂಡಲ್‌ ಆಗಿ ಬಳಸಿರುವುದಾಗಿ ಹೇಳಿಕೊಂಡಿದ್ದಾರೆ.

ಲಲ್ಲನ್‌ಟಾಪ್‌ ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು ಇತ್ತೀಚೆಗೆ ನೀಡುತ್ತಿರುವ ಅವಾರ್ಡ್‌ಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಅತ್ಯಂತ ಶ್ರಮವಹಿಸಿ ಯಾರು ನಟನೆ ಮಾಡುತ್ತಾರೋ, ನಟನೆಗೆ ತಮ್ಮ ಜೀವನವನ್ನೇ ಸಮರ್ಪಿಸುತ್ತಾರೋ ಅವರೆಲ್ಲರೂ ಉತ್ತಮ ನಟರೇ. ಅಂತವರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಇವರೇ ಈ ವರ್ಷದ ಉತ್ತಮ ನಟ ಎಂದು ಹೇಳಿದರೆ ಅದು ಎಷ್ಟು ಸರಿ? ಅಂತಹ ಪ್ರಶಸ್ತಿಗಳ ಬಗ್ಗೆ ನನಗೆ ಗೌರವಿಲ್ಲ. ಇತ್ತೀಚೆಗೆ ಬಂದ ಎರಡು ಪ್ರಶಸ್ತಿಗಳನ್ನು ಸ್ವೀಕರಿಸಲು ನಾನು ಹೋಗಲೇ ಇಲ್ಲ‘ ಎಂದರು.

‘ನಾನು ಫಾರ್ಮ್‌ ಹೌಸ್‌ ನಿರ್ಮಿಸಿದಾಗ ಅಲ್ಲಿ ಈ ಅವಾರ್ಡ್‌ಗಳನ್ನು ಬಳಸಲು ನಿರ್ಧರಿಸಿದೆ. ಫಿಲ್ಮ್‌ಫೇರ್‌ ಅವಾರ್ಡ್‌ಗಳನ್ನು ಬಾಗಿಲನ ಹ್ಯಾಂಡಲ್‌ ಆಗಿ ಮಾಡಿದೆ. ಇದರಿಂದ ವಾಶ್‌ರೂಮ್‌ಗೆ ಹೋಗುವವರಿಗೆ ಎರಡು ಫಿಲ್ಮ್‌ಫೇರ್‌ ಅವಾರ್ಡ್‌ಗಳು ಸಿಗುತ್ತವೆ‘ ಎಂದು ಜೋರಾಗಿ ನಕ್ಕು ಹೇಳಿದರು.

‘ಹಿಂದೆಲ್ಲ ನನಗೆ ಪ್ರಶಸ್ತಿ ಪಡೆದಾಗ ಸಂತೋಷವಾಗುತ್ತಿತ್ತು. ಈಗೀಗ ಈ ಪ್ರಶಸ್ತಿಗಳಲ್ಲಿ ನನಗೆ ಯಾವುದೇ ಮೌಲ್ಯ ಕಾಣಿಸುತ್ತಿಲ್ಲ. ಒಬ್ಬ ವ್ಯಕ್ತಿ ಪ್ರಶಸ್ತಿ ಪಡೆಯುತ್ತಿರುವುದು ಲಾಭಿಯ ಮುಖಾಂತರವೇ ವಿನಃ ತನ್ನ ಪ್ರತಿಭೆ ಮೂಲಕವಲ್ಲ ಎಂದು ಕೊನೆಗೆ ನನಗೆ ಅರ್ಥವಾಗುತ್ತಾ ಹೋಯಿತು. ಆ ನಂತರದಿಂದ ಇಂತಹ ಪ್ರಶಸ್ತಿಗಳನ್ನು ಪಡೆಯುವುದನ್ನೇ ನಿಲ್ಲಿಸಿಬಿಟ್ಟೆ‘ ಎಂದು ಹೇಳಿದರು.

’ಪದ್ಮಶ್ರಿ ಮತ್ತು ಪದ್ಮಭೂಷಣ ಪಡೆದಾಗ ನನಗೆ ಸಂತೋಷವಾಗಿತ್ತು. ಆದರೆ, ಈ ಸ್ಪರ್ಧಾತ್ಮಕ ಪ್ರಶಸ್ತಿಗಳ ಬಗ್ಗೆ ನನಗೆ ಆಸಕ್ತಿಯಿಲ್ಲ‘ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT