ಮಂಗಳವಾರ, ಮಾರ್ಚ್ 21, 2023
24 °C
ಎಸ್‌.ಎಸ್ ರಾಜಮೌಳಿ ನಿರ್ದೇಶನದ ಸಿನಿಮಾಗೆ ಮತ್ತೊಂದು ಗರಿ

RRR ಸಿನಿಮಾದ ‘ನಾಟು ನಾಟು‘ ಹಾಡಿಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೌರವ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಎಸ್‌.ಎಸ್‌ ರಾಜಮೌಳಿ ನಿರ್ದೇಶನದ ಜ್ಯೂನಿಯರ್‌ ಎನ್. ಟಿ.ಆರ್ ಮತ್ತು ರಾಮ್ ಚರಣ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಆರ್‌.ಆರ್.ಆರ್‌ ಸಿನಿಮಾಗೆ ಮತ್ತೊಂದು ಗರಿ ಲಭಿಸಿದೆ.

ಸಿನಿಮಾದ ‘ನಾಟು ನಾಟು‘ ಹಾಡಿಗೆ 2023ರ ಗೋಲ್ಡನ್‌ ಗ್ಲೋಬ್‌ ಅವಾರ್ಡ್ಸ್‌ ಪ್ರಾಪ್ತವಾಗಿದೆ. ‘ಬೆಸ್ಟ್‌ ಒರಿಜಿನಲ್‌ ಸಾಂಗ್‌‘ ವಿಭಾಗದಲ್ಲಿ ಈ ಹಾಡಿಗೆ ಪ್ರಶಸ್ತಿ ಲಭಿಸಿದೆ. ತೆಲುಗು ಹಾಡಿಗೆ ಈ ಗೌರವ ಲಭಿಸಿದೆ.

ತೆಲುಗು ಭಾಷೆಯ ‘ನಾಟು ನಾಟು‘ ಹಾಡನ್ನು ದಿಗ್ಗಜ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ ಅವರು ಸಂಯೋಜಿಸಿದ್ದು, ಕಾಲ ಭೈರವ ಹಾಗೂ ರಾಹುಲ್‌ ಸಿಪ್ಲಿಗುಂಜ್‌ ಅವರು ಬರೆದಿದ್ದಾರೆ.

ಇಂಗ್ಲಿಷ್ ಹೊರತಾದ ಅತ್ಯುತ್ತಮ ಸಿನಿಮಾ’ ಹಾಗೂ ‘ಅತ್ಯುತ್ತಮ ಹಾಡು’ ವಿಭಾಗದಲ್ಲಿ ಈ ಚಿತ್ರ ಆಯ್ಕೆಯಾಗಿತ್ತು. ಹಲವು ಇಂಗ್ಲಿಷೇತರ ಸಿನಿಮಾಗಳನ್ನು ಹಿಂದಿಕ್ಕಿ ಇದೀಗ ಅತ್ಯುತ್ತಮ ಹಾಡು ವಿಭಾಗದಲ್ಲಿ ‘ನಾಟು ನಾಟು‘ ಹಾಡು ಪ್ರಶಸ್ತಿ ಬಾಚಿಕೊಂಡಿದೆ. 

ಇನ್ನು ಪ‍್ರಶಸ್ತಿ ಗೆದ್ದ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ‘ಎಂತಹ ಐತಿಹಾಸಿಕ ಸಾಧನೆ! ಗೋಲ್ಡನ್ ಗ್ಲೋಬ್ಸ್ ಅತ್ಯುತ್ತಮ ಮೂಲ ಹಾಡು – ಮೋಷನ್ ಪಿಕ್ಚರ್ ಪ್ರಶಸ್ತಿ ಲಭಿಸಿದೆ. ಕೀರವಾಣಿ ಅವರಿಗೆ, ರಾಜಮೌಳಿ ಅವರಿಗೆ ಹಾಗೂ ಆರ್‌.ಆರ್.ಆರ್ ಸಿನಿಮಾ ತಂಡಕ್ಕೆ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು! ಭಾರತವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ‘ ಎಂದು ಮೆಗಾಸ್ಟಾರ್‌ ಚಿರಂಜೀವಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು