ಭಾನುವಾರ, ಆಗಸ್ಟ್ 14, 2022
23 °C
ಪತಿ ಮತ್ತು ಸಂಬಂಧಿಕರ ವಿರುದ್ದ ಎಫ್‌ಐಆರ್ ದಾಖಲಿಸಿದ ಆಲಿಯಾ

ನವಾಜುದ್ದೀನ್ ಸಿದ್ಧಿಕಿ ವಿರುದ್ಧ ಪತ್ನಿ ದೂರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಜಾಫ್ಫರ್‌ನಗರ: ‘ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ, ಸಿದ್ಧಿಕಿ ಪತ್ನಿ ಅಲಿಯಾ ಇಲ್ಲಿನ ಬುಧಾನಾ ಪೊಲೀಸ್ ಠಾಣೆಯಲ್ಲಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ’ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.

ಅಲಿಯಾ ಮತ್ತು ನವಾಜುದ್ದೀನ್ ಸಿದ್ಧಿಕಿ ಈಗ ಒಟ್ಟಿಗೆ ವಾಸಿಸುತ್ತಿಲ್ಲ.

‘ಮುಂಬೈನಿಂದ ಬುಧಾನಾ ಪೊಲೀಸ್ ಠಾಣೆಗೆ ಬಂದ ಅಲಿಯಾ ತಾವು ಈ ಹಿಂದೆ ನೀಡಿದ್ದ ದೂರನ್ನು ದೃಢೀಕರಿಸಿದರು’ ಎಂದು ಠಾಣಾಧಿಕಾರಿ ಕುಶಲ್‌ಪಲ್ ಸಿಂಗ್ ಮಾಹಿತಿ ನೀಡಿದ್ದಾರೆ.

ಮುಂಬೈ ಪೊಲೀಸ್ ಠಾಣೆಯಲ್ಲಿ ಜುಲೈ 27ರಂದು ಅಲಿಯಾ ದೂರು ಸಲ್ಲಿಸಿದ್ದು, ಅಲ್ಲಿ ದಾಖಲಾಗಿದ್ದ ಎಫ್‌ಐಆರ್ ಅನ್ನು ಬುಧಾನಾ ಠಾಣೆಗೆ ವರ್ಗಾಯಿಸಲಾಗಿತ್ತು. ಅಪರಾಧ ನಡೆದ ಸ್ಥಳ ಬುಧಾನಾ ಠಾಣೆ ವ್ಯಾಪ್ತಿಗೆ ಬರುತ್ತಿದ್ದರಿಂದ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಏನಿದೆ ದೂರಿನಲ್ಲಿ?: 
‘2012ರಲ್ಲಿ ನವಾಜುದ್ದೀನ್ ಸಿದ್ಧಿಕಿ ಅವರ ಸಹೋದರ ಮಿನ್ಹಾಜುದ್ದೀನ್ ಸಿದ್ಧಿಕಿ ನನಗೆ ಕಿರುಕುಳ ನೀಡಿದ್ದರು. ಈ ಬಗ್ಗೆ ಗಂಡನ ಮನೆಯವರಿಗೆ ತಿಳಿಸಿದಾಗ ಅವರು, ಈ ಬಗ್ಗೆ ಮೌನವಾಗಿರು. ಕುಟುಂಬದೊಳಗೇ ಸಮಸ್ಯೆ ಬಗೆಹರಿಸಿಕೋ ಎಂದು ಹೇಳಿದ್ದರು’ ಎಂದು ಅಲಿಯಾ ತಮ್ಮ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ನವಾಜುದ್ದೀನ್ ಸಿದ್ಧಿಕಿ ಮುಂಬೈನಿಂದ ತಮ್ಮ ಸ್ವಂತ ಊರು ಬುಧಾನಾಕ್ಕೆ ಹಿಂತಿರುಗಿದ್ದಾರೆ.

‘ಅಲಿಯಾ ಪೊಲೀಸ್ ಠಾಣೆಯಲ್ಲಿ ತನ್ನ ಹೇಳಿಕೆ ನೀಡಲು ಬಂದಾಗ ನವಾಜುದ್ದೀನ್ ಬುಧಾನಾದಲ್ಲಿರಲಿಲ್ಲ. ಆಗ ಅವರು ಡೆಹ್ರಾಡೂನ್‌ಗೆ ಹೋಗಿದ್ದರು’ ಎಂದು ನವಾಜುದ್ದೀನ್ ಸಿದ್ಧಿಕಿ ಕುಟುಂಬದ ಸದಸ್ಯರು ಹೇಳಿದ್ದಾರೆ. ‘ಬುಧಾನಾದಲ್ಲಿ ಅಲಿಯಾ ನಮ್ಮನ್ನು ಭೇಟಿಯಾಗಿಲ್ಲ’ ಎಂದಿರುವ ಸಿದ್ಧಿಕಿ ಕುಟುಂಬ ಅಲಿಯಾ ಆರೋಪವನ್ನೂ ನಿರಾಕರಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು