ತಿರುಪತಿ: ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಲ್ಪಡುವ ನಟಿ ನಯನ ತಾರಾ ತಮ್ಮ ಭಾವಿ ಪತಿ, ಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ಜೊತೆ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಅವರ ಚಿತ್ರಗಳು ಸೋಮವಾರ ಟ್ರೆಂಡಿಂಗ್ ಪಟ್ಟಿ ಸೇರಿವೆ.

ಇತ್ತೀಚೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ತಾರಾ ದಂಪತಿಯ ಚಿತ್ರ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಟ್ರೆಂಡಿಂಗ್ ಚಿತ್ರಗಳಲ್ಲಿ ನಯನತಾರಾ ನೀಲಿ ಬಣ್ಣದ ಉಡುಪಿನಲ್ಲಿ ಸುಂದರವಾಗಿ ಕಾಣಿಸುತ್ತಿದ್ದರೆ, ವಿಘ್ನೇಶ್ ಶಿವನ್ ಬಿಳಿ ಕುರ್ತಾ ತೊಟ್ಟಿದ್ಧಾರೆ.

2015ರಲ್ಲಿ ವಿಘ್ನೇಶ್ ನಿರ್ದೇಶನದ ‘ನಾನುಂ ರೌಡಿಧಾನ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್ ನಡುವೆ ಪ್ರೇಮಾಂಕುರವಾಗಿತ್ತು.

ಈ ತಿಂಗಳ ಆರಂಭದಲ್ಲಿ, ವಿಘ್ನೇಶ್ ಶಿವನ್ ತಮ್ಮ 36ನೇ ಹುಟ್ಟುಹಬ್ಬವನ್ನು ನಯನತಾರಾ ಜೊತೆ ಆಚರಿಸಿಕೊಂಡರು. ಅವರು ತಮ್ಮ ಹುಟ್ಟುಹಬ್ಬದ ಪಾರ್ಟಿಯ ಚಿತ್ರಗಳನ್ನು ಹಂಚಿಕೊಂಡಿದ್ದರು.

ಕೊರಿಯಾದ ಬ್ಲೈಂಡ್ ಚಿತ್ರದ ರಿಮೇಕ್ ಆಗಿರುವ ನೆತ್ರಿಕನ್‌ನಲ್ಲಿ ಕೊನೆಯದಾಗಿ ನಯನತಾರಾ ಕಾಣಿಸಿಕೊಂಡಿದ್ದರು. ಮಿಲಿಂದ್ ರಾವ್ ನಿರ್ದೇಶಿಸಿದ್ದ ಈ ಚಿತ್ರವನ್ನು ವಿಘ್ನೇಶ್ ನಿರ್ಮಿಸಿದ್ದರು. ರಜನಿಕಾಂತ್ ಜೊತೆ ‘ಅಣ್ಣತ್ತೆ’ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಕಾತು ವಾಕುಲಾ ರೆಂಡು ಕಾದಲ್, ಅಟ್ಲೀ, ಗಾಡ್ ಫಾದರ್ ಮತ್ತು ಗೋಲ್ಡ್ ಅವರ ಮುಂಬರುವ ಚಿತ್ರಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.