ನಯನತಾರಾ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿ. ಸದ್ಯ ಆಕೆಯ ಕೈಯಲ್ಲಿ ಹಲವು ಸಿನಿಮಾಗಳಿವೆ. ಈ ನಡುವೆಯೇ ಹೊಸ ಸಿನಿಮಾಗಳನ್ನೂ ಒಪ್ಪಿಕೊಳ್ಳುವುದರಲ್ಲಿ ಆಕೆ ಹಿಂದಡಿ ಇಟ್ಟಿಲ್ಲ. ನವಕಾಂತ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಆಕೆ ನಟಿಸುತ್ತಿದ್ದಾರೆ ಎಂಬ ಸುದ್ದಿ ಕಾಲಿವುಡ್ ಪಡಸಾಲೆಯಿಂದ ಹೊರಬಿದ್ದಿದೆ.

ಅಂದಹಾಗೆ ಇದು ಮಹಿಳಾ ಕೇಂದ್ರಿತ ಚಿತ್ರವಂತೆ. ನವಕಾಂತ್ ಅವರು 450ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಸ ನಿರ್ದೇಶಿಸಿರುವ ರ್ಯಾಂಬೊ ರಾಜ್ಕುಮಾರ್ ಅವರ ಪುತ್ರ. ಇದು ಅವರು ನಿರ್ದೇಶಿಸುತ್ತಿರುವ ಮೊದಲ ಚಿತ್ರವೂ ಹೌದು. 2021ಕ್ಕೆ ಇದು ಸೆಟ್ಟೇರುವ ನಿರೀಕ್ಷೆಯಿದೆ.

ನವಕಾಂತ್ಗೆ ಕಿರುಚಿತ್ರಗಳನ್ನು ನಿರ್ದೇಶಿಸಿರುವ ಅನುಭವವಿದೆ. ಲಾಕ್ಡೌನ್ ಅವಧಿಯಲ್ಲಿಯೇ ನಯನತಾರಾ ಅವರಿಗೆ ಸಿನಿಮಾದ ಕಥೆ ನಿರೂಪಿಸಿದ್ದರಂತೆ. ಕಥೆಯ ಪಾತ್ರ ಇಷ್ಟವಾಗಿದ್ದರಿಂದ ನಟಿಸಲು ಒಪ್ಪಿಗೆ ನೀಡಿದ್ದಾರೆ.

ಶೀಘ್ರವೇ, ಈ ಸಿನಿಮಾದ ಟೈಟಲ್ ಮತ್ತು ಪಾತ್ರವರ್ಗದ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಚಿತ್ರದ ಪ್ರಮುಖ ಭಾಗದ ಚಿತ್ರೀಕರಣವನ್ನು ಚೆನ್ನೈನಲ್ಲಿಯೇ ನಡೆಸಲು ಚಿತ್ರತಂಡ ನಿರ್ಧರಿಸಿದೆ. ವಿವಿಧ ಭಾಷೆಯ ಕಲಾವಿದರನ್ನು ಆಯ್ಕೆ ಮಾಡಲಿದೆಯಂತೆ. ಹಾಗಾಗಿ, ಈ ಚಿತ್ರ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ನಡಿ ನಿರ್ಮಾಣವಾಗುವ ಸಾಧ್ಯತೆಯಿದೆ.

ಇತ್ತೀಚೆಗೆ ವಿಶೇಷ ವಿಮಾನದಲ್ಲಿ ಗೋವಾಕ್ಕೆ ಭೇಟಿ ನೀಡಿದ್ದ ನಯನತಾರಾ ಮತ್ತು ಆಕೆಯ ಬಾಯ್ಫ್ರೆಂಡ್ ವಿಘ್ನೇಶ್ ಶಿವನ್ ಚೆನ್ನೈಗೆ ಮರಳಿದ್ದಾರೆ. ವಿಘ್ನೇಶ್ ಶಿವನ್ ನಿರ್ದೇಶಿಸುತ್ತಿರುವ ‘ಕಾತುವಾಕುಲ ರೆಂಡು ಕಡಲ್’ ಸಿನಿಮಾದಲ್ಲೂ ನಯನತಾರಾ ನಟಿಸುತ್ತಿದ್ದಾರೆ. ಕಳೆದ ಏಪ್ರಿಲ್ನಲ್ಲಿಯೇ ಇದರ ಶೂಟಿಂಗ್ ಆರಂಭವಾಗಬೇಕಿತ್ತು. ಕೋವಿಡ್–19 ಪರಿಣಾಮ ಮುಂದೂಡಿಕೆಯಾಗಿತ್ತು. ನವೆಂಬರ್ನಿಂದ ಇದರ ಚಿತ್ರೀಕರಣ ಶುರುವಾಗುವ ನಿರೀಕ್ಷೆಯಿದೆ.

ಆಕೆ ನಟಿಸಿರುವ ‘ಮೂಕುತಿ ಅಮ್ಮನ್’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿಯಿದೆ. ಅಲ್ಲದೇ, ‘ಸೂಪರ್ ಸ್ಟಾರ್’ ರಜನಿಕಾಂತ್ ನಟನೆಯ ‘ಅಣ್ಣಾತೆ’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.