ಮಂಗಳವಾರ, ಮಾರ್ಚ್ 9, 2021
29 °C

ನಜ್ರಿಯಾ ನಜೀಮ್ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲೆಯಾಳಂ ನಟಿ‌ ನಜ್ರಿಯಾ ನಜೀಮ್ ಅವರ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್‌ ಆಗಿದೆ. ಜ. 18ರಂದು ರಾತ್ರಿ ಈ ಕೃತ್ಯ ನಡೆದಿದೆ. ಇನ್‌ಸ್ಟಾಗ್ರಾಂನಲ್ಲಿ ಇದ್ದಕ್ಕಿದ್ದಂತೆಯೇ ನೇರ ಪ್ರಸಾರದ ವಿಡಿಯೋವೊಂದು ಹರಿದಾಡತೊಡಗಿದೆ. ಅದಾಗಲೇ ನೇರ ಪ್ರಸಾರವನ್ನು 28 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು. 

ಲೈವ್‌ ವಿಡಿಯೋದಲ್ಲಿ ಏನಿತ್ತು?
ಉದ್ಯಾನದಲ್ಲಿ ಇಬ್ಬರು ಪುರುಷರು ನಡೆದು ಹೋಗುವ ನೆರಳು ಗೋಚರಿಸುತ್ತದೆ. ಇಂಗ್ಲಿಷ್‌ ಭಾಷೆಯಲ್ಲಿ ಮಾತುಗಳೂ ಕೇಳಿಸುತ್ತವೆ. ಬಹುಶಃ ನಜ್ರಿಯಾ ಅವರು ಪತಿ ಫಹಾದ್‌ ಫಾಸಿಲ್‌ ಅವರೊಂದಿಗೆ ಯಾವುದೋ ವಿಶೇಷ ಜಾಗಕ್ಕೆ ಹೋಗುತ್ತಿರಬಹುದು ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಬರಬರುತ್ತಾ ಕೆಲವು ಅಸಹ್ಯಕರ ಮಾತುಗಳೂ ಕೇಳಿಬಂದವು. ಆಗಲೇ ಅಭಿಮಾನಿಗಳಿಗೆ ಈ ಖಾತೆ ಹ್ಯಾಕ್‌ ಆಗಿರುವ ಬಗ್ಗೆ ಅನುಮಾನ ಮೂಡಿತು. ಕೂಡಲೇ ನಜ್ರಿಯಾ ಅವರಿಗೆ ಅಭಿಮಾನಿಗಳು ಮಾಹಿತಿ ನೀಡಿದರು.

ತಕ್ಷಣವೇ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರತಿಕ್ರಿಯಿಸಿದ ನಜ್ರಿಯಾ, ‘ಕೆಲವು ಜೋಕರ್‌ಗಳು ನನ್ನ ಖಾತೆಯನ್ನು ಹ್ಯಾಕ್‌ ಮಾಡಿದ್ದಾರೆ. ಕೆಲವು ದಿನಗಳವರೆಗೆ ನಾನು ಈ ಖಾತೆಯಲ್ಲಿ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಶುಭರಾತ್ರಿ’ ಎಂದು ಬರೆದುಕೊಂಡಿದ್ದಾರೆ. 

ಇತ್ತೀಚೆಗೆ ಅನೇಕ ನಟ ನಟಿಯರ ಇನ್‌ಸ್ಟಾಗ್ರಾಂ ಪ್ರೊಫೈಲ್‌ ಹ್ಯಾಕ್ ಆಗಿದೆ. ಬಾಲಿವುಡ್‌ ನಟಿ ಟಬು ಅವರ ಖಾತೆಯೂ ಹ್ಯಾಕ್‌ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇತ್ತೀಚೆಗಷ್ಟೇ ಅನ್ವರ್‌ ರಶೀದ್‌ ನಿರ್ದೇಶನದ ಚಿತ್ರ ‘ಟ್ರಾನ್ಸ್‌’ನಲ್ಲಿ ಪತಿ ಫಹಾದ್‌ ಫಾಸಿಲ್‌ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಟಾಲಿವುಡ್‌ಗೂ ಪ್ರವೇಶಿಸುವ ಸಿದ್ಧತೆಯಲ್ಲಿದ್ದಾರೆ. ಅಲ್ಲಿಯೂ ಚಿತ್ರವೊಂದರಲ್ಲಿ ನಟಿಸಲು ಸಹಿ ಹಾಕಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು