ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಪ್ಲಯರ್‌ ಶಂಕರ’ ಸೇರಿದಂತೆ ನಾಲ್ಕು ಚಿತ್ರಗಳು ಇಂದು ತೆರೆಗೆ

Published 1 ಫೆಬ್ರುವರಿ 2024, 23:30 IST
Last Updated 1 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಇಂದು (ಫೆ.2) ‘ಸಪ್ಲಯರ್‌ ಶಂಕರ’ ಸೇರಿದಂತೆ ನಾಲ್ಕು ಸಿನಿಮಾಗಳು ತೆರೆ ಕಾಣುತ್ತಿವೆ.

ಕ್ಲಿಕ್‌:

ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಪುತ್ರ ಮಾಸ್ಟರ್ ಪವನ್ ಬಸ್ರೂರು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕ್ಲಿಕ್’ ಸಿನಿಮಾ ಇಂದು(ಫೆ.2) ತೆರೆ ಕಾಣುತ್ತಿದೆ.

ಐಟಿ ಉದ್ಯೋಗಿಯಾಗಿರುವ ಶಶಿಕಿರಣ್ ತಮ್ಮದೇ ಶರಣ್ಯ ಫಿಲ್ಮ್ಸ್‌ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡಿ, ನಿರ್ದೇಶಿಸಿದ್ದಾರೆ. ಕಾರ್ತಿಕ್, ಚಂದ್ರಕಲಾ ಮೋಹನ್, ರಚನಾ ದಶರತ್, ಸಂಜು ಬಸಯ್ಯ ಮೊದಲಾದವರು ತಾರಾಬಳಗದಲ್ಲಿದ್ದಾರೆ. ಆಕಾಶ್ ಪರ್ವ-ವಿಶ್ವಾಸ್ ಕೌಶಿಕ್ ಸಂಗೀತ ನಿರ್ದೇಶನ, ಜೀವನ್ ಗೌಡ ಛಾಯಾಚಿತ್ರಗ್ರಹಣ, ವಿನಯ್ ಕುಮಾರ್ ಸಂಕಲನವಿದೆ.

ಯಥಾಭವ:

ಗೌತಮ್ ಬಸವರಾಜು ನಿರ್ದೇಶಿಸಿ, ಹಿರಿಯ ನಟ ರಾಕ್ ಲೈನ್ ಸುಧಾಕರ್ ಅವರ ಪುತ್ರ ಗೌತಮ್ ಸುಧಾಕರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಯಥಾಭವ’ ಚಿತ್ರ ಇಂದು ಬಿಡುಗಡೆಗೊಳ್ಳುತ್ತಿದೆ. ಪವನ್ ಶಂಕರ್ ಹಾಗೂ ಸಹನ ಸುಧಾಕರ್ ನಾಯಕ ನಾಯಕಿಯಾಗಿ ನಟಿಸಿದ್ದಾರೆ.  ದತ್ತಣ್ಣ,  ಬಾಲ ರಾಜವಾಡಿ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಸುಜಾತ ಕುಮಾರಿ ಹಾಗೂ ಅನಿಲ್ ಕುಮಾರ್ ಬಿ.ಎನ್ ನಿರ್ಮಾಣ ಮಾಡಿರುವ  ಚಿತ್ರಕ್ಕೆ ಹರ್ಷ್ ಮಿಶ್ರ ಛಾಯಾಗ್ರಹಣ, ಉತ್ಸವ್ ಶ್ರೇಯಸ್ ಸಂಗೀತವಿದೆ.

ಸತ್ಯಂ ಶಿವಂ:

ಸುಪಾರಿ ಕಿಲ್ಲರ್ ಕಥಾಹಂದರ ಹೊಂದಿರುವ ‘ಸತ್ಯಂ ಶಿವಂ’ ತೆರೆ ಕಾಣುತ್ತಿದೆ. ಯತಿರಾಜ್‌ ನಿರ್ದೇಶನವಿದೆ. ಬುಲೆಟ್ ರಾಜು ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ.  ಸಂಗೀತಾ, ವೀಣ್ ಸುಂದರ್ ಮತ್ತು ತೇಜಸ್ವಿನಿ ತಾರಾಗಣದಲ್ಲಿದ್ದಾರೆ. ವಿ ಮನೋಹರ್ ಸಂಗೀತ ನೀಡಿದ್ದು, ವಿದ್ಯಾ ನಾಗೇಶ್ ಅವರ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT