ಕೋಟ್ಯಂತರ ಜನರ ಮನಸ್ಸಿನಲ್ಲಿ ಉಳಿದುಕೊಂಡಿರುವ ಹಾಡುಗಳನ್ನು ಮತ್ತೆ ರಿಮೇಕ್ ಮಾಡುವ ಟ್ರೆಂಡ್ ಬಾಲಿವುಡ್‌ನಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿದೆ.

ಈ ವರ್ಷ ಸೂಪರ್ ಹಿಟ್ ಹಾಡುಗಳ ರಿಮೇಕ್ ಸರಣಿ ಸ್ವಲ್ಪ ಜೋರಾಗಿಯೇ ಇದೆ. ‘ಟಿಪ್ ಟಿಪ್ ಬರಸಾ ಪಾನಿ’ ಹಾಡು ರಿಮೇಕ್ ಆಗುತ್ತಿರುವುದು ದೊಡ್ಡ ಸುದ್ದಿ ಮಾಡಿತ್ತು. ಅಕ್ಷಯ್ ಕುಮಾರ್ ಹಾಗೂ ರವೀನಾ ಟಂಡನ್ ಅಭಿನಯದ ‘ಮೊಹ್ರಾ’ ಸಿನಿಮಾದ ಈ ಹಾಡನ್ನು ಮತ್ತೆ ಅಕ್ಷಯ್ ಅಭಿನಯದ ‘ಸೂರ್ಯವಂಶಿ’ ಸಿನಿಮಾದಲ್ಲಿಯೇ ರಿಮೇಕ್ ಮಾಡಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಈ ಹಾಡಿಗೆ ಕತ್ರಿನಾ ಕೈಫ್ ಡಾನ್ಸ್ ಮಾಡಲಿದ್ದಾರೆ. ಈಗಾಗಲೇ ಶೂಟಿಂಗ್ ಕೂಡ ಆಗಿದೆ. ಕತ್ರಿನಾ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಫೋಟೊ ಅಪ್‌ಲೋಡ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಫರ‍್ಹಾ ಖಾನ್ ಕೊರಿಯೋಗ್ರಫಿ ಮಾಡಿದ್ದಾರೆ.

ಈ ವರ್ಷ ‘ದಿಲ್ಬರ್’, ‘ಓ ಸಖಿ ಸಖಿ’ ಹಾಡುಗಳು ರಿಮೇಕ್ ಆಗುವ ಮೂಲಕ ಹಿಟ್ ಆಗಿವೆ. ‘ಏಕ್ ತೋ ಕಮ್ ಜಿಂದಗಾನಿ‘ ಹಾಡನ್ನು ‘ನೋರಾ ಫತೇ’ ಸಿನಿಮಾದಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಈ ಹಾಡು ಕೂಡ ಹಿಟ್ ಆಗಿದೆ. ಇದರ ಬೆನ್ನಲ್ಲೇ 2020ರಲ್ಲಿ ಹತ್ತಕ್ಕೂ ಹೆಚ್ಚು ಹಾಡುಗಳನ್ನು ರಿಮೇಕ್ ಮಾಡುವ ಉದ್ದೇಶವನ್ನು ಬಾಲಿವುಡ್ ಹೊಂದಿದೆ.

ಶ್ರದ್ಧಾ ಕಪೂರ್ ಅಭಿನಯದ ‘ಸ್ಟ್ರೀಟ್ ಡಾನ್ಸರ್ ತ್ರಿಡಿ’ ಸಿನಿಮಾದಲ್ಲಿ ಶಂಕರ್ ಮಹಾದೇವನ್ ಅವರ ‘ಸುನೋ ಗೌರ್ ಸೇ ದುನಿಯಾ ವಾಲೋ’ ಜನಪ್ರಿಯ ಹಾಡು ರಿಮೇಕ್ ಮಾಡಲಾಗುತ್ತಿದೆ. ‘ಎಬಿಸಿಡಿ’ ಹಾಗೂ ‘ಎಬಿಸಿಡಿ 2’ ಸಿನಿಮಾಗಳಲ್ಲೂ ಹಳೆಯ ದೇಶಭಕ್ತಿ ಗೀತೆಗಳನ್ನು ರಿಮೇಕ್ ಮಾಡಿ ಅದಕ್ಕೆ ಡಾನ್ಸ್ ಮಾಡಲಾಗಿತ್ತು.

ಅಮಿತಾಭ್ ಬಚ್ಚನ್ ಮತ್ತು ಇಮ್ರಾನ್ ಹಶ್ಮಿ ಒಟ್ಟಿಗೆ ಅಭಿನಯಿಸುತ್ತಿರುವ ‘ಚಹರೆ’ ಸಿನಿಮಾದಲ್ಲಿ ‘ಝಲಕ್ ದಿಕ್‌ಲಾಜಾ’ ಹಾಡನ್ನು ರಿಮೇಕ್ ಮಾಡಲಾಗುತ್ತಿದೆ. ‘ಅಕ್ಸರ್’ ಸಿನಿಮಾದ ಈ ಹಾಡನ್ನು ಮತ್ತೊಮ್ಮೆ ಹಿಮೇಶ್ ರೇಷಮಿಯಾ ರಿಮೇಕ್ ಮಾಡಲಿದ್ದಾರೆ.

ಅಕ್ಷಯ್ ಕುಮಾರ್ ಅಭಿನಯದ ‘ಬಚ್ಚನ್ ಪಾಂಡೆ’ ಸಿನಿಮಾದಲ್ಲಿ ಕೂಡ ಹಳೆಯ ಒಂದು ಹಾಡು ರಿಮೇಕ್ ಮಾಡಲಾಗುತ್ತಿದೆ.

ಅಭಿಷೇಕ್ ಬಚ್ಚನ್, ಪ್ರಿಯಾಂಕಾ ಚೋಪ್ರಾ, ಜಾನ್ ಅಬ್ರಹಾಂ ನಟನೆಯ ‘ದೋಸ್ತಾನಾ’ ಸಿನಿಮಾದ ಎರಡನೇ ಅವತರಣಿಕೆ ‘ದೋಸ್ತಾನಾ 2’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್, ಜಾನ್ಹವಿ ಕಪೂರ್ ಮತ್ತು ಲಕ್ಷ್ಯ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ‘ಮಾ ದಾ ಲಾಡ್ಲಾ’ ಹಾಡು ರಿಮೇಕ್ ಆಗುತ್ತಿದೆ. ತನಿಷ್ಕ್ ಬಗಾಚಿ ಸಂಗೀತ ನಿರ್ದೇಶನ ಮಾಡಲಿದ್ದಾರೆ.

‘ಪತಿ ಪತ್ನಿ ಔರ್ ವೋ’ ಸಿನಿಮಾದಲ್ಲಿ ‘ಅಖಿಯೋಂಸೆ ಗೋಲಿ ಮಾರೆ’ ಹಾಡನ್ನು ರಿಮೇಕ್ ಮಾಡಲಾಗುತ್ತಿದೆ. ಕಾರ್ತಿಕ್ ಆರ್ಯನ್, ಅನನ್ಯಾ ಪಾಂಡೆ ಮತ್ತು ಭೂಮಿ ಪಡ್ನೇಕರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ದುಲ್ಹೇ ರಾಜಾ’ ಸಿನಿಮಾದ ಈ ಹಾಡು ಜನಪ್ರಿಯವಾಗಿತ್ತು. ಗೋವಿಂದಾ ಹಾಗೂ ರವೀನಾ ಟಂಡನ್ ಈ ಹಾಡಿಗೆ ನೃತ್ಯ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.