ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಕುಡಿ ನಿಹಾರಿಕಾ ಕೋನಿಡೆಲಾ ತಮ್ಮ ಮದುವೆಯ ಗುಟ್ಟನ್ನು ರಟ್ಟು ಮಾಡಿದ್ದಾರೆ. ಕಾಗ್ನಿಜೆಂಟ್ ಕಂಪನಿಯಲ್ಲಿ ಕೆಲಸ ಮಾಡುವ ಎಂಜಿನಿಯರ್ ಹುಡುಗನನ್ನು ವರಿಸಲಿದ್ದಾರೆ ನಿಹಾರಿಕಾ.

ಯಾರು ಈ ನಿಹಾರಿಕಾ?
ನಿಹಾರಿಕಾ ಚಿರಂಜೀವಿ ತಮ್ಮ ನಾಗುಬಾಬು ಅವರ ಮಗಳು.ಕೋನಿಡೆಲಾ ಕುಟುಂಬದ ಅಲ್ಲು ಅರ್ಜುನ್, ರಾಮ್ಚರಣ್, ವರುಣ್ತೇಜ್, ಅಲ್ಲು ಶಿರಿಷ್, ಸಾಯಿ ಧರ್ಮ ತೇಜ ಮುಂತಾದ ನಟರು ಈಗಾಗಲೇ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ.ಆದರೆ ಕೋನಿಡೆಲಾ ಕುಟುಂಬದಿಂದ ಸಿನಿರಂಗಕ್ಕೆ ಬಂದ ಒಬ್ಬರೇ ಒಬ್ಬ ಹೆಣ್ಣು ಮಗಳು ಎಂದರೆ ಅದು ನಿಹಾರಿಕಾ ಕೋನಿಡೆಲಾ.2016ರಲ್ಲಿ ‘ಒಕ್ಕ ಮನಸು’ ಸಿನಿಮಾದ ಮೂಲಕ ನಟನೆ ಆರಂಭಿಸಿದ ಇವರು 5 ಸಿನಿಮಾಗಳಿಗೆ ಹಚ್ಚಿದ್ದಾರೆ. ಸೂರ್ಯಕಾಂತಂ ಸಿನಿಮಾ ಇವರಿಗೆ ಹೆಚ್ಚು ಹೆಸರು ತಂದುಕೊಟ್ಟಿತ್ತು.

ಎಂಜಿನಿಯರ್ ಆಗಿರುವ ವೆಂಕಟ ಚೈತನ್ಯ ಜೊನ್ನಲಗಡ್ಡ ಅವರನ್ನು ವರಿಸಲಿರುವ ನಿಹಾರಿಕಾ ಈ ಕುರಿತು ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಿನಿರಂಗಕ್ಕೆ ಬರುವ ಮೊದಲು ನಿರೂಪಕಿಯಾಗಿದ್ದ ಇವರು ಅನೇಕ ವೆಬ್ ಸೀರಿಸ್ಗಳಲ್ಲೂ ನಟಿಸಿದ್ದಾರೆ.

ಪಿಳನಿಯ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ಚೈತನ್ಯ ಸ್ಟ್ರೀಟ್ ಫೋಟೊಗ್ರಾಫರ್ ಕೂಡ ಹೌದು. ಇವರು ಗುಂಟೂರು ವ್ಯಾಪ್ತಿಯ ಐಜಿ ಜೆ. ಪ್ರಭಾಕರ್ ರಾವ್ ಅವರ ಪುತ್ರ. ನೀಳಕಾಯದ ಚೆಲುವ ಚೈತನ್ಯ ನಿಹಾರಿಕಾಗೆ ಪರ್ಫೆಕ್ಟ್ ಜೋಡಿಯಾಗುವುದರಲ್ಲಿ ಸಂಶಯವಿಲ್ಲ.

ನಿಹಾರಿಕ ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ಫೋಟೊದಲ್ಲಿ ಚೈತನ್ಯ ಅವರನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದು ‘ನನ್ನವನು’ ಎಂದು ಬರೆದುಕೊಂಡಿದ್ದಾರೆ. ಆ ಫೋಟೊವು ಅವರ ಪ್ರೀತಿಯ ಆಳವನ್ನು ವ್ಯಕ್ತಪಡಿಸುವಂತಿತ್ತು. ಆಗಸ್ಟ್ 13ರಂದು ಎಂಗೇಜ್ಮೆಂಟ್ ಮಾಡಿಕೊಳ್ಳಲಿರುವ ಈ ಜೋಡಿ ಮುಂದಿನ ವರ್ಷ ಮದುವೆಯಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.