ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪ್ತಪದಿ ತುಳಿದ ನಟಿ ನಿಕ್ಕಿ ಗಲ್ರಾನಿ, ಆದಿ ಪಿನಿಶೆಟ್ಟಿ: ಮದುವೆ ಫೋಟೊಗಳು ವೈರಲ್‌

Last Updated 19 ಮೇ 2022, 6:23 IST
ಅಕ್ಷರ ಗಾತ್ರ

ನಟಿ ನಿಕ್ಕಿ ಗಲ್ರಾನಿ ಅವರು ತೆಲುಗು ನಟ ಆದಿ ಪಿನಿಶೆಟ್ಟಿ ಅವರನ್ನು ಮದುವೆಯಾಗಿದ್ದಾರೆ. ಅದ್ದೂರಿ ಮದುವೆಯ ಫೋಟೊಗಳುಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಬುಧವಾರ (ಮೇ 18) ಚೆನ್ನೈನಲ್ಲಿ ಮದುವೆಯಾಗಿದ್ದಾರೆ. ಈ ವಿವಾಹ ಕಾರ್ಯಕ್ರಮಕ್ಕೆ ಎರಡು ಕುಟುಂಬಗಳ ಸದಸ್ಯರು ಮತ್ತು ಆಪ್ತರು ಮಾತ್ರವೇ ಭಾಗವಹಿಸಿದ್ದರು. ತೀರ ಖಾಸಗಿಯಾಗಿ ನಡೆದ ಈ ಮದುವೆ ಅದ್ದೂರಿಯಾಗಿ ನಡೆದಿದೆ ಎಂದು ಅವರು ಆಪ್ತರು ಹೇಳಿದ್ದಾರೆ.

ಮೆಹಂದಿ ಹಾಗೂ ಮದುವೆ ಸಮಾರಂಭದ ಪೋಟೊಗಳು ನಿಕ್ಕಿ ಮತ್ತು ಆದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗಳನ್ನು ಅಭಿಮಾನಿಗಳು ಶೇರ್‌ ಮಾಡುತ್ತಿದ್ದಾರೆ.

2022ರ ಮಾರ್ಚ್‌ 23ರದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಇದೀಗ ಸಪ್ತಪದಿ ತುಳಿದಿದೆ.

ಕನ್ನಡದ ಅಜಿತ್‌, ಓ ಪ್ರೇಮವೇ, ಜಂಬೂ ಸವಾರಿ, ಸಿದ್ಧಾರ್ಥ ಸಿನಿಮಾಗಳಲ್ಲಿ ನಿಕ್ಕಿ ನಟಿಸಿದ್ದಾರೆ. ಸದ್ಯ ಅವರು ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅವರು ಹೆಚ್ಚು ನಟಿಸುತ್ತಿದ್ದಾರೆ.

ಆದಿ ಕೂಡ ತೆಲುಗು, ತಮಿಳಿನ ಮುಖ್ಯ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಕೊಚಾಡಿಯನ್‌, ತೆಲುಗಿನ ರಂಗಸ್ಥಳಂ, ಗುಡ್ ಲಕ್ ಸಖಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಿಕ್ಕಿ ಗಲ್ರಾನಿ ಅವರು ಕನ್ನಡದ ನಟಿ ಸಂಜನಾ ಗಲ್ರಾನಿ ಅವರ ಸಹೋದರಿಯಾಗಿದ್ದಾರೆ. ನಿಕ್ಕಿ ಹಾಗೂ ಆದಿ ವಿವಾಹಕ್ಕೆ ಅಭಿಮಾನಿಗಳು ಮತ್ತು ಸಿನಿತಾರೆಯರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳನ್ನು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT