‘ನಿಶ್ಯಬ್ದಂ’ ಮೊದಲ ಶಾಟ್ ಓಕೆ

ಸೋಮವಾರ, ಜೂನ್ 17, 2019
22 °C

‘ನಿಶ್ಯಬ್ದಂ’ ಮೊದಲ ಶಾಟ್ ಓಕೆ

Published:
Updated:
Prajavani

ಮಾಧವನ್ ಮತ್ತು ಅನುಷ್ಕಾ ಶೆಟ್ಟಿ ಜೋಡಿಯಾಗಿ ನಟಿಸುತ್ತಿರುವ ದ್ವಿಭಾಷಾ ಚಲನಚಿತ್ರ ‘ನಿಶ್ಯಬ್ದಂ’, (ಸೈಲೆನ್ಸ್‌) ಅಪಾರ ಕುತೂಹಲ ಹುಟ್ಟುಹಾಕಿದೆ. ‘ಭಾಗಮತಿ’ ನಂತರ ಸ್ವೀಟಿ ಅರ್ಥಾತ್ ಅನುಷ್ಕಾ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು, ಇದಕ್ಕಾಗಿ ಸ್ವೀಟಿ ಸಾಕಷ್ಟು ತೂಕವನ್ನೂ ಇಳಿಸಿಕೊಂಡಿದ್ದಾರೆ. 

ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ನಿಶ್ಯಬ್ದಂ’ನ ಮೊದಲ ಶಾಟ್ ಅನ್ನು ಇತ್ತೀಚಿಗೆ ಚಿತ್ರೀಕರಿಸಲಾಯಿತು. ಈ ಬಗ್ಗೆ ಮಧುಕರ್ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಗಣೇಶನ ಮೂರ್ತಿಯನ್ನು ಚಿತ್ರೀಕರಿಸುವ ಮೂಲಕ ಶೂಟಿಂಗ್‌ಗೆ ಚಾಲನೆ ನೀಡಲಾಯಿತು ಎಂದು ಮಾಹಿತಿ ನೀಡಿದ್ದಾರೆ. 

ಮೊದಲ ಶಾಟ್ ಅನ್ನು ನಿರ್ಮಾಪಕ ಕೋನ ವೆಂಕಟೇಶ್ ಅವರ ಸಹೋದರಿ, ಸೈಲಿಸ್ಟ್‌ ನೀರಜಾ ಕೋನಾ ಕೂಡ ಹಂಚಿಕೊಂಡಿದ್ದು, ’ನಿಶ್ಯಬ್ದಂ’ ಚಿತ್ರೀಕರಣ ಶುರುವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರ ಇಂಗ್ಲಿಷ್ ಮತ್ತು ತಮಿಳಿನಲ್ಲಿ ಬಿಡುಗಡೆಯಾಗಲಿದ್ದು, ಚಿತ್ರಕ್ಕೆ ಗೋಪಿ ಸುಂದರ್ ಅವರ ಸಂಗೀತವಿದೆ. 

‘ನಿಶ್ಯಬ್ದಂ’ ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿದ್ದು, ಚಿತ್ರದ ಬಗ್ಗೆ ಅನುಷ್ಕಾ ಮತ್ತು ಮಾಧವನ್ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಬಾಹುಬಲಿ 2’ ರ ನಂತರ ನಂತರ ಬಂದ ಸ್ವೀಟಿಯ ‘ಭಾಗಮತಿ’ ಸಿನಿಮಾ ಹಿಟ್ ಆಗಿದ್ದರೂ ನಂತರ ಅನುಷ್ಕಾ ಇತರ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !