ಬುಧವಾರ, ಜೂನ್ 3, 2020
27 °C

ಕೋವಿಡ್‌–19 ಸಂತ್ರಸ್ತರಿಗಾಗಿ ಫ್ಯಾಶನ್ ಉಡುಪು ಹರಾಜಿಗಿಟ್ಟ ನಿತ್ಯಾ ಮೆನನ್

ಏಜೇನ್ಸಿಸ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಂದನವನ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳ ಬೇಡಿಕೆ ನಟಿಯಾಗಿರುವ ನಿತ್ಯಾ ಮೆನನ್‌ ತಮ್ಮ ಫ್ಯಾಶನ್‌ ಉಡುಪುಗಳನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಕೊರೊನಾ ವೈರಸ್‌ ಸಂತ್ರಸ್ತರಿಗೆ ನೀಡಲು ಮುಂದಾಗಿದ್ದಾರೆ.

ಕಿಚ್ಚ ಸುದೀಪ್‌ ನಟನೆಯ ಕೋಟಿಗೊಬ್ಬ2 ಸಿನಿಮಾದಲ್ಲಿ ನಟಿಸಿದ್ದ ನಿತ್ಯಾ ಮೆನನ್‌ ಕನ್ನಡ ಸಿನಿಮಾ ರಸಿಕರ ಮನಗೆದಿದ್ದರು. ಲಾಕ್‌ಡೌನ್‌ ಸಮಯದಲ್ಲಿ  ಸಾಮಾಜಿಕ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದರು. ಇದೀಗ ಇನ್‌ಸ್ಟಾಗ್ರಾಮ್‌ ಮೂಲಕ ಕೋವಿಡ್‌–19 ಸಂತ್ರಸ್ತರಿಗೆ ನೆರವು ನೀಡುವ ಬಗ್ಗೆ ಪೋಸ್ಟ್‌ವೊಂದನ್ನು ಹಾಕಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ ಹಲವು ಸೆಲೆಬ್ರಿಟಿಗಳು ಅಡುಗೆ ಮಾಡುವ, ಆಟ ಆಡುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿ ಇದ್ದರು. ಆದರೆ ನಿತ್ಯಾ ಅಭಿಮಾನಿಗಳಿಂದ ದೂರವೇ ಉಳಿದು ಬಿಟ್ಟರು! ಕೊರೊನಾ ವೈರಸ್‌ ಸಂತ್ರಸ್ತರಿಗೆ ನೆರವು ನೀಡುವ ಮೂಲಕ ಮತ್ತೆ ಅಭಿಮಾನಿಗಳ ಸಂಪರ್ಕಕ್ಕೆ ಬಂದಿದ್ದಾರೆ.

ಲ್ಯಾಕ್ಮಿ ಫ್ಯಾಶನ್‌ ಶೋನಲ್ಲಿ ಧರಿಸಿದ್ದ ಉಡುಪುಗಳನ್ನು ಹರಾಜು ಹಾಕಿ ಅದರಿಂದ ಸಂಗ್ರಹವಾದ ಎಲ್ಲಾ ಹಣವನ್ನು ‘ಅರ್ಪಣಂ‘ಟ್ರಸ್ಟ್‌ ಮೂಲಕ ಲಾಕ್‌ಡೌನ್ ಪರಿಣಾಮದಿಂದಾಗಿ ಉದ್ಯೋಗ ಇಲ್ಲದೆ ಕಂಗೆಟ್ಟಿರುವ ಗ್ರಾಮೀಣ ಜನರಿಗೆ ನೀಡಲಾಗುವುದು. ಇದರಿಂದ ಅವರು ಮುಂದೆ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ ಎಂದು ನಿತ್ಯಾ ಇನ್‌ಸ್ಟಾಗ್ರಾಂನಲ್ಲಿ ಹೇಳಿದ್ದಾರೆ. ಭಾನುವಾರ 4 ಗಂಟೆಗೆ ಒಂದು ಉಡುಪಿನ ಹರಾಜು ನಡೆಯಲಿದೆ.

ನಿತ್ಯಾ ನಡೆಯಿಂದಾಗಿ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು