ಶನಿವಾರ, ಸೆಪ್ಟೆಂಬರ್ 18, 2021
30 °C

ಇನ್‌ಸ್ಟಾಗ್ರಾಂನಲ್ಲಿ ಮೂರು ಕೋಟಿ ಫಾಲೋವರ್ಸ್ ಪಡೆದ ನೋರಾ ಫತೇಹಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Nora Fatehi Instagram

ಬೆಂಗಳೂರು: ಬಾಲಿವುಡ್ ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ಇನ್‌ಸ್ಟಾಗ್ರಾಂನಲ್ಲಿ ಮೂರು ಕೋಟಿ ಫಾಲೋವರ್ಸ್ ಪಡೆದುಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಮೊರಾಕೊದಿಂದ ಫೋಟೊ ಒಂದನ್ನು ಪೋಸ್ಟ್ ಮಾಡುವ ಮೂಲಕ ನೋರಾ ಫತೇಹಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ನೋರಾ ಬೀಚ್ ಫೋಟೊಗೆ 16 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

ಸ್ಟ್ರೀಟ್ ಡ್ಯಾನ್ಸರ್ 3D, ರಾಕಿ ಹ್ಯಾಂಡ್ಸಮ್, ಸತ್ಯಮೇವ ಜಯತೆ ಸಹಿತ ಹಲವು ಚಿತ್ರಗಳಲ್ಲಿ ನಟಿಸಿರುವ ನೋರಾ ಫತೇಹಿ, ವಿಶೇಷವಾದ ನೃತ್ಯ ಶೈಲಿಯ ಮೂಲಕ ಗಮನ ಸೆಳೆದಿದ್ದಾರೆ.

ಅಲ್ಲದೆ, ಟಿವಿ ರಿಯಾಲಿಟಿ ಶೋ- ಬಿಗ್ ಬಾಸ್ 9 ಮತ್ತು ಝಲಕ್ ಧಿಕ್‌ಲ್ ಆಜಾ 9 ರಲ್ಲೂ ನೋರಾ ಕಾಣಿಸಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಮೂರು ಕೋಟಿ ಫಾಲೋವರ್ಸ್‌ ಪಡೆದುಕೊಂಡಿರುವ ಸಂತಸದ ಜತೆಗೆ ಅಭಿಮಾನಿಗಳಿಗೆ ನೋರಾ ಧನ್ಯವಾದ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು