ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋರಾ ನನ್ನಿಂದಾಗಿ ಮೊರಾಕ್ಕೊದಲ್ಲಿ ದೊಡ್ಡ ಮನೆ ಖರೀದಿಸಿದ್ದಾಳೆ: ಸುಖೇಶ್

Last Updated 24 ಜನವರಿ 2023, 8:51 IST
ಅಕ್ಷರ ಗಾತ್ರ

ಮುಂಬೈ: ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಹಾಗೂ ವಂಚನೆ ಪ್ರಕರಣದಲ್ಲಿ ದಿನಕ್ಕೊಂದು ಸ್ವಾರಸ್ಯಕರ ಸಂಗತಿ ಹೊರಬೀಳುತ್ತಿವೆ.

ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಸುಕೇಶ್ ಚಂದ್ರಶೇಖರ್ ವಿರುದ್ಧ ನಟಿ ನೋರಾ ಫತೇಹಿ ಆರೋಪ ಮಾಡಿ ‘ಗರ್ಲ್‌ಫ್ರೆಂಡ್ ಆಗಲು ಒಪ್ಪಿಕೊಂಡರೆ ದೊಡ್ಡ ಮನೆ ನೀಡುವುದಾಗಿ ಸುಕೇಶ್ ಭರವಸೆ ನೀಡಿದ್ದ’ಎಂದು ನ್ಯಾಯಾಲಯಕ್ಕೆ ನೋರಾ ಹೇಳಿಕ ನೀಡಿದ್ದರು.

ಈ ಬಗ್ಗೆ ತಮ್ಮ ವಕೀಲ ಅನಂತ್ ಮಲಿಕ್ ಮತ್ತು ಎ .ಕೆ. ಸಿಂಗ್ ಮೂಲಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸುಕೇಶ್, ನೋರಾ ಇ.ಡಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಈಗ ನಾಟಕ ಮಾಡುತ್ತಿದ್ದಾಳೆ. ನಾನು ಕೊಟ್ಟಿರುವ ಹಣದಿಂದ ಈಗಾಗಲೇ ಮೊರಾಕ್ಕೊದ ಕಾಸಬ್ಲಾಂಕಾದಲ್ಲಿ ದೊಡ್ಡ ಮನೆ ಖರೀದಿಸಿದ್ದಾಳೆ ಎಂದು ಆರೋಪಿಸಿದ್ದಾನೆ.

ಅಲ್ಲದೇ ನೋರಾ ರೇಂಜ್ ರೋವರ್ ಕಾರು ಕೇಳಿದ್ದಳು. ಅದು ಸಾಧ್ಯವಾಗದಿದ್ದಕ್ಕೆ ಬಿಎಂಡಬ್ಲೂ ಕಾರ್ ಕೊಟ್ಟಿದ್ದೆ. ನೋರಾ ನನ್ನ ನಡುವಿನ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳು ಇ.ಡಿ ಬಳಿ ಇವೆ ಎಂದು ಸುಕೇಶ್ ಹೇಳಿದ್ದಾನೆ.

ಬಾಲಿವುಡ್ ನಟಿ ನೋರಾ ಫತೇಹಿ, ಜಾಕ್ವೆಲಿನ್ ಫರ್ನಾಂಡಿಸ್ ಬಗ್ಗೆ ತೀವ್ರ ಅಸೂಯೆಪಡುತ್ತಿದ್ದರು ಎಂದು ₹200 ಕೋಟಿ ಸುಲಿಗೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಸುಕೇಶ್ ಚಂದ್ರಶೇಖರ್ ಆಪಾದಿಸಿದ್ದಾನೆ.

‘ನೋರಾ ದಿನಕ್ಕೆ ಕೊನೆ ಪಕ್ಷ 10 ಬಾರಿಯಾದರೂ ಕರೆ ಮಾಡುತ್ತಿದ್ದಳು. ಉತ್ತರಿಸದಿದ್ದರೂ ಕರೆ ಮಾಡುತ್ತಲೇ ಇರುತ್ತಿದ್ದಳು’ಎಂದು ಸುಕೇಶ್ ಹೇಳಿದ್ದಾನೆ.

‘ನಾನು ಮತ್ತು ಜಾಕ್ವೆಲಿನ್ ಸಹ ಜೀವನ ನಡೆಸುತ್ತಿದ್ದರಿಂದ ನೋರಾಳನ್ನು ಕಡೆಗಣಿಸಿದ್ದೆ. ಆದರೆ, ನೋರಾ ಕರೆ ಮಾಡಿ ನನಗೆ ತೊಂದರೆ ಕೊಡುತ್ತಿದ್ದಳು. ಸಂಗೀತಕ್ಕೆ ಸಂಬಂಧಿಸಿದ ಕಂಪನಿ ಸ್ಥಾಪಿಸಲು ಬಾಬಿಗೆ(ನೋರಾ ಸಂಬಂಧಿ) ಸಹಾಯ ಮಾಡಿ ಎಂದು ಹೇಳುತ್ತಿದ್ದಳು. ಅವಳು ಬಯಸಿದ ಹರ್ಮ್ಸ್ ಬ್ರಾಂಡಿನ ಬ್ಯಾಗ್‌ಗಳು ಮತ್ತು ಆಭರಣಗಳ ಚಿತ್ರಗಳನ್ನು ನನಗೆ ಕಳುಹಿಸುತ್ತಲೇ ಇದ್ದಳು. ಅವುಗಳನ್ನು ನಾನು ಅವಳಿಗೆ ನೀಡುವ ಮೂಲಕ ಅವಳಿಂದ ಅಂತರ ಕಾಯ್ದುಕೊಂಡಿದ್ದೇನೆ. ಅವುಗಳನ್ನೆಲ್ಲ ನೋರಾ ಇಲ್ಲಿಯವರೆಗೆ ಬಳಸುತ್ತಿದ್ದಳು. ಅವಳ ಬಳಿ ಇರುವ ಹರ್ಮ್ಸ್ ಬ್ಯಾಗ್‌ಗಳ ಒಂದೇ ಒಂದು ಬಿಲ್ ಅನ್ನು ಕೊಡಲು ಹೇಳಿ. ಅದು ಅವಳಿಂದ ಸಾಧ್ಯವಿಲ್ಲ. ಏಕೆಂದರೆ, ಅವುಗಳನ್ನು ನಾನು ಖರೀದಿಸಿ ನೀಡಿದ್ದೇನೆ. ಆ ಬ್ಯಾಗ್‌ಗಳು ₹2 ಕೋಟಿಗಿಂತ ಹೆಚ್ಚು ಮೌಲ್ಯದ್ದಾಗಿವೆ’ಎಂದು ಸುಕೇಶ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT