ಭಾನುವಾರ, ಡಿಸೆಂಬರ್ 5, 2021
25 °C

ನೃತ್ಯ ನಿರ್ದೇಶಕ ಶಿವಶಂಕರ್‌ ಮಾಸ್ಟರ್‌ಗೆ ಕೋವಿಡ್‌: ಪರಿಸ್ಥಿತಿ ಗಂಭೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತೆಲುಗು, ತಮಿಳಿನ ಖ್ಯಾತ ನೃತ್ಯ ನಿರ್ದೇಶಕ ಶಿವಶಂಕರ್‌ ಮಾಸ್ಟರ್‌ ಕೋವಿಡ್‌ನಿಂದ ಬಳಲುತ್ತಿದ್ದು ಅವರು ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಶಿವಶಂಕರ್‌ ಮಾಸ್ಟರ್‌ ಸೇರಿದಂತೆ ಅವರ ಹಿರಿಯ ಮಗನಿಗೆ ಕೋವಿಡ್‌ ದೃಢಪಟ್ಟಿದೆ. ಸದ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ, ಹಣಕಾಸು ನೆರವು ನೀಡುವಂತೆ ಅವರ ಕಿರಿಯ ಪುತ್ರ ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ. 

ಬಾಲಿವುಡ್‌ ನಟ ಸೋನು ಸೂದ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ನಾನು ಶಿವಶಂಕರ್‌ ಕುಟುಂಬದವರ ಜೊತೆ ಸಂಪರ್ಕದಲ್ಲಿ ಇರುವೆ ಎಂದು ಟ್ವೀಟ್‌ ಮಾಡಿದ್ದಾರೆ. 

ಶಿವಶಂಕರ್ ಅವರು ಆಸ್ಪತ್ರೆಯ ಬೆಡ್‌ ಮೇಲೆ ಮಲಗಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜೀವರಕ್ಷಕ ಸಾಧನಗಳನ್ನು ಅವರಿಗೆ ಅಳವಡಿಸಲಾಗಿದೆ.

ಈವರೆಗೂ ಸುಮಾರು 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಹಲವು ಸಲ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮಗಧೀರ ಸಿನಿಮಾದ ನೃತ್ಯಕ್ಕೆ ಅವರಿಗೆ ರಾಷ್ಟ್ರಪಶಸ್ತಿ ಸಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು