ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಸ್ರತ್ ಬರೂಚಾಗೆ ‘ಏಷಿಯಾದ ಅತ್ಯುತ್ತಮ ನಟಿ‘ ಪ್ರಶಸ್ತಿ

Last Updated 29 ಸೆಪ್ಟೆಂಬರ್ 2021, 14:43 IST
ಅಕ್ಷರ ಗಾತ್ರ

ಮುಂಬೈ: ‘ದಕ್ಷಿಣ ಕೊರಿಯಾದ ಪ್ರತಿಷ್ಟಿತ ‘ಭೂಸನ್ ಫಿಲ್ಮ್‌ಫೆಸ್ಟಿವಲ್‌‘ನಲ್ಲಿ ಏಷಿಯಾದ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಬಾಲಿವುಡ್ ನಟಿ ನುಸ್ರತ್ ಬರೂಚಾ ಪಡೆದಿದ್ದಾರೆ‘ ಎಂದು ಐಎಎನ್‌ಎಸ್ ವರದಿ ಮಾಡಿದೆ.

ಕಳೆದ ವರ್ಷ ಲಾಕ್‌ಡೌನ್‌ ಸಂದರ್ಭದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದ ರಾಜ್‌ ಮೆಹ್ತಾ ನಿರ್ದೇಶನದ ‘ಅಜಿಬ್ ದಾಸ್ತಾನ್ಸ್‘ ಸಿನಿಮಾದಲ್ಲಿನ ಅಭಿನಯಕ್ಕಾಗಿ ನುಸ್ರತ್ ಬರೂಚಾ ಅವರು ಅತ್ಯುತ್ತಮ ಏಷಿಯಾ ನಟಿ ಪ್ರಶಸ್ತಿಗೆ ಭಾಜನಾಗಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್‌ಗೆ ಈ ಪ್ರಶಸ್ತಿ ಬಂದಿದೆ.

ಭೂಸನ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಏಷಿಯಾ ಭಾಗದಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಲು ‘ಏಷಿಯನ್ ಕಂಟೆಸ್ಟಂಟ್ ಅವಾರ್ಡ್‘ ಪ್ರಶಸ್ತಿ ನೀಡಲಾಗುತ್ತಿದೆ.

2006 ರಲ್ಲಿ ‘ಜೈ ಸಂತೋಷಿ ಮಾ‘ ಸಿನಿಮಾ ಮೂಲಕ ತಮ್ಮ ಸಿನಿಪಯಣ ಆರಂಭಿಸಿದ್ದ ನುಸ್ರತ್ ಬರೂಚಾ ‘ಲವ್ ಸೆಕ್ಸ್ ಔರ್ ದೋಖಾ‘, ‘ಪ್ಯಾರಾ ಕಾ ಪಂಚನಾಮಾ‘, ‘ಡ್ರೀಮ್ ಗರ್ಲ್‘ ಸೇರಿದಂತೆ ಬಾಲಿವುಡ್‌ನಲ್ಲಿ ಸುಮಾರು 13 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT