ಶುಕ್ರವಾರ, ಅಕ್ಟೋಬರ್ 22, 2021
21 °C

ನಟ ಯಶ್ ಜತೆ ನುಸ್ರತ್ ಜಹಾನ್ ಮದುವೆ?: ಹುಟ್ಟುಹಬ್ಬದ ಫೋಟೊ ವೈರಲ್!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Nusrat Jahan Instagram Post

ಬೆಂಗಳೂರು: ನಟಿ ಮತ್ತು ಟಿಎಂಸಿ ಸಂಸದೆ ನುಸ್ರತ್ ಜಹಾನ್ ವೈಯಕ್ತಿಕ ಜೀವನದ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ.

ಮದುವೆ, ವಿಚ್ಛೇದನ, ಮಗು ಮತ್ತು ಮಗುವಿನ ತಂದೆಯ ವಿಚಾರದಲ್ಲಿ ನುಸ್ರತ್ ಇತ್ತೀಚೆಗೆ ವಿವಾದ ಸೃಷ್ಟಿಸಿದ್ದರು. ಈ ಬಾರಿ ನಟ ಯಶ್‌ ದಾಸ್‌ಗುಪ್ತ ಜತೆಗೆ ಹುಟ್ಟುಹಬ್ಬದ ಆಚರಣೆಯಲ್ಲಿ ಅವರು ಪಾಲ್ಗೊಂಡಿದ್ದು, ಅದರ ಫೋಟೊಗಳು ವೈರಲ್ ಆಗಿವೆ.

ನುಸ್ರತ್ ಜಹಾನ್ ಅವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಯಶ್ ದಾಸ್‌ಗುಪ್ತ ಅವರನ್ನು ಟ್ಯಾಗ್ ಮಾಡಿ, ಕೇಕ್ ಮತ್ತು ಹುಟ್ಟುಹಬ್ಬದ ಕ್ಯಾಂಡಲ್ ಲೈಟ್ ಡಿನ್ನರ್ ಫೋಟೊ ಪೋಸ್ಟ್ ಮಾಡಿದ್ದಾರೆ.

ಕೇಕ್‌ನಲ್ಲಿ ಹ್ಯಾಪಿ ಬರ್ತ್‌ಡೇ ಹಸ್ಬೆಂಡ್, ಡ್ಯಾಡ್ ಎಂಬ ಬರಹವಿದೆ. ಜತೆಗೆ ಮತ್ತೊಂದು ಫೋಟೊ ಪೋಸ್ಟ್ ಮಾಡಿರುವ ನಟಿ, ಅದರಲ್ಲಿ ಹ್ಯಾಪಿ ಬರ್ತ್‌ಡೇ ಮೈ ಲವ್ ಎಂದು ಎಮೋಜಿ ಸಹಿತ ಪೋಸ್ಟ್ ಮಾಡಿದ್ದಾರೆ.

ನುಸ್ರತ್ ಅವರಿಗೆ ಆ.25ರಂದು ಮಗು ಜನಿಸಿತ್ತು. ಅದಕ್ಕೂ ಮೊದಲು ನಿಖಿಲ್ ಜೈನ್ ಅವರೊಂದಿಗಿನ ಮದುವೆ ಮುರಿದು ಕೆಲವು ತಿಂಗಳ ಹಿಂದೆ ವಿಚ್ಛೇದನ ಪಡೆದುಕೊಂಡಿದ್ದರು. 


ನುಸ್ರತ್ ಜಹಾನ್ ಮತ್ತು ಯಶ್ ದಾಸ್‌ಗುಪ್ತ ಫೋಟೊ ವೈರಲ್

ಬಳಿಕ ಯಶ್ ದಾಸ್‌ಗುಪ್ತ ಜತೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ಸುದ್ದಿ ಕೇಳಿಬಂದಿತ್ತು. ಅಲ್ಲದೆ, ಮಗುವಿನ ತಂದೆ ಕುರಿತು ಕೂಡ ನುಸ್ರತ್ ಸರಿಯಾದ ಉತ್ತರ ನೀಡಿರಲಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು